ಭಾರತದ ದೃಢ ಬೆಳವಣಿ ಬಗ್ಗೆ ಮೂಡೀಸ್ ವಿಶ್ವಾಸ

ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣಕ್ಕೆ ಪೂರಕವಾಗಿ ಮುಂದುವರೆಯುತ್ತಿರುವ ಸುಧಾರಣಾ ಕ್ರಮಗಳು ಹಾಗೂ ಹಣದುಬ್ಬರ ನಿಯಂತ್ರಣ ದೃಢ ಬೆಳವಣಿಗೆಗೆ ಸಹಕಾರಿಯಾಗಲಿದೆ
ಮೂಡೀಸ್
ಮೂಡೀಸ್

ನವದೆಹಲಿ: ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣಕ್ಕೆ ಪೂರಕವಾಗಿ ಮುಂದುವರೆಯುತ್ತಿರುವ ಸುಧಾರಣಾ ಕ್ರಮಗಳು ಹಾಗೂ ಹಣದುಬ್ಬರ ನಿಯಂತ್ರಣ ದೃಢ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮೂಡೀಸ್‌ ಹೂಡಿಕೆದಾರರ ಸೇವಾ ವಿಭಾಗ ವಿಶ್ವಾಸ ವ್ಯಕ್ತಪಡಿಸಿದೆ.

ಬೆಳವಣಿಗೆಗೆ ಸಹಕಾರಿಯಾಗಿರುವ ನೀತಿಗಳನ್ನು, ಸಾಂಸ್ಥಿಕ ಸುಧಾರಣೆಗಳನ್ನು ರೂಪಿಸಲು ನಡೆಸುತ್ತಿರುವ ಯತ್ನ ಯಶಸ್ವಿಯಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆ ದೃಢವಾಗಲು ಸಹಕಾರಿಯಾಲಿದೆ ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆ ಶೇ. 7.5 ರಾಷ್ಟಾಗಲಿದೆ ಎಂದು ತನ್ನ ವಾರ್ಷಿಕ ವಿಶ್ಲೇಷಣೆಯಲ್ಲಿ ಮೂಡೀಸ್ ಅಭಿಪ್ರಾಯಾಟ್ಟಿದೆ.

ದೃಢವಾದ ಬೆಳವಣಿಗೆ ಸಾಮಾರ್ಥ್ಯ, ಖಾಸಗಿ ಉಳಿತಾಯ ದರ ಹೆಚ್ಚಿರುವುದು ಭಾರತದ ಕ್ರೆಡಿಟ್ ಪ್ರೊಫೈಲ್ ಗೆ ಸಹಕಾರಿಯಾಗಿದೆ ಆದರೂ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಇರುವ ಆತಂಕಕಾರಿ ಅಂಶಗಳು ಭಾರತದ ಸಾಲದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದು ಮೂಡೀಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com