2,579 ಕೋಟಿ ರು.ಗೆ ಟೆನ್ ಸ್ಪೋರ್ಟ್ಸ್ ಖರೀದಿಸಿದ ಸೋನಿ

ಕ್ರೀಡಾ ಮಾಧ್ಯಮ ಲೋಕದ ದಿಗ್ಗಜ ಟೆನ್ ಸ್ಪೋರ್ಟ್ಸ್ ನೆಟ್‌ವರ್ಕ್ ಸಂಸ್ಥೆಯನ್ನು ಝೀ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಿಂದ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಸಂಸ್ಥೆ ಖರೀದಿಸಿದೆ.
ಟೆನ್ ಸ್ಪೋರ್ಟ್ಸ್ (ಸಂಗ್ರಹ ಚಿತ್ರ)
ಟೆನ್ ಸ್ಪೋರ್ಟ್ಸ್ (ಸಂಗ್ರಹ ಚಿತ್ರ)

ಮುಂಬೈ: ಕ್ರೀಡಾ ಮಾಧ್ಯಮ ಲೋಕದ ದಿಗ್ಗಜ ಟೆನ್ ಸ್ಪೋರ್ಟ್ಸ್ ನೆಟ್‌ವರ್ಕ್ ಸಂಸ್ಥೆಯನ್ನು ಝೀ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಿಂದ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಸಂಸ್ಥೆ ಖರೀದಿಸಿದೆ.

ಬರೊಬ್ಬರಿ 2, 577 ಕೋಟಿ ರು. (385 ಮಿಲಿಯನ್ ಡಾಲರ್) ನೀಡಿ ಸೋನಿ ಪಿಕ್ಚರ್ಸ್ ನೆಟ್ ವರ್ಕ್ಸ್ ಸಂಸ್ಥೆ ಖರೀದಿಸಿದ್ದು, ದಕ್ಷಿಣ-ಏಷ್ಯಾ ವಿಭಾಗದಲ್ಲಿ ಸಾಕಷ್ಟು ಜನಪ್ರಿಯಗೊಂಡಿರುವ ಸೋನಿ  ಪಿಕ್ಚರ್ಸ್ ನೆಟ್ ವರ್ಕ್ಸ್ (ಎಸ್‌ಪಿಎನ್) ಜತೆಗೆ ಟೆನ್ ಸ್ಪೋರ್ಟ್ಸ್ ನೆಟ್‌ವರ್ಕ್ ಸಮೂಹ ಕೈಜೋಡಿಸುತ್ತಿದೆ ಎಂದು ಬುಧವಾರ ಘೋಷಿಸಲಾಗಿದೆ. ಬುಧವಾರ ನಡೆದ ಅಧಿಕೃತ ಸಭೆಯಲ್ಲಿ ಜೀ  ಸಮೂಹ ಸಂಸ್ಥೆಯ ಎಂಡಿ ಪುನೀತ್ ಗೋಯೆಂಕಾ ಅವರು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಟೆನ್ ಸ್ಪೋರ್ಟ್ ವಾಹಿನಿಯನ್ನು ಮಾರಾಟ ಮಾಡಿದ್ದಾರೆ.

ಇನ್ನು ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್‌ಪಿಎನ್ ಸಿಇಒ ಎನ್‌ಪಿ ಸಿಂಗ್ ಅವರು, ಉಭಯ ಸಂಸ್ಥೆಗಳ ಒಪ್ಪಂದದಿಂದಾಗಿ ಫುಟ್‌ಬಾಲ್, ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳ  ವೀಕ್ಷಕರಿಗೆ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದಿಂದಲೂ ಸಹಕಾರಿಯಾಗಲಿದ್ದು, ಉಪಖಂಡ ಹಾಗೂ ಭಾರತೀಯ ವೀಕ್ಷಕರಿಗೆ ವಿಶೇಷವಾಗಿ ಸಹಾಯಕವಾಗಲಿದೆ’ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ಟೆನ್ ಸ್ಪೋರ್ಟ್ಸ್ ಅನ್ನು ದುಬೈ ಮೂಲದ ಉದ್ಯಮಿ ಅಬ್ದುಲ್ ರೆಹಮಾನ್ ಬುಖಾತಿರ್ ಅವರ ತಾಜ್ ಸಮೂಹ ಸಂಸ್ಥೆಯಿಂದ 2006ರಿಂದ 2011ರವರೆಗೆ ವಿವಿಧ ಕಂತುಗಳಲ್ಲಿ  ಒಟ್ಟು 107 ಮಿಲಿಯನ್ ಡಾಲರ್ ಹಣ ನೀಡಿ ಜೀ ಸಂಸ್ಥೆ ಖರೀದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com