ದಾರಿ ತಪ್ಪಿಸುವ ಜಾಹಿರಾತು: 'ಪತಂಜಲಿ'ಗೆ 11 ಲಕ್ಷ ರೂ. ದಂಡ!

ಹೆಚ್ಚೆಚ್ಚು ಮಾರಾಟವಾಗಬೇಕು ಎಂಬ ಕಾರಣಕ್ಕೆ ತಪ್ಪು ಮಾಹಿತಿ ನೀಡುವ ಮತ್ತು ದಾರಿ ತಪ್ಪಿಸುವ ಜಾಹಿರಾತು ಪ್ರಸಾರ ಮಾಡಿದ ಆರೋಪದ ಮೇರೆಗೆ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ 11 ಲಕ್ಷ ರು. ದಂಡ ವಿಧಿಸಲಾಗಿದೆ.
ಪತಂಜಲಿ ಸಂಸ್ಥೆಗೆ ದಂಡ (ಸಂಗ್ರಹ ಚಿತ್ರ)
ಪತಂಜಲಿ ಸಂಸ್ಥೆಗೆ ದಂಡ (ಸಂಗ್ರಹ ಚಿತ್ರ)

ನವದೆಹಲಿ: ಹೆಚ್ಚೆಚ್ಚು ಮಾರಾಟವಾಗಬೇಕು ಎಂಬ ಕಾರಣಕ್ಕೆ ತಪ್ಪು ಮಾಹಿತಿ ನೀಡುವ ಮತ್ತು ದಾರಿ ತಪ್ಪಿಸುವ ಜಾಹಿರಾತು ಪ್ರಸಾರ ಮಾಡಿದ ಆರೋಪದ ಮೇರೆಗೆ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ 11 ಲಕ್ಷ ರು. ದಂಡವನ್ನು ವಿಧಿಸಲಾಗಿದೆ.

ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ ದಂಡ ವಿಧಿಸಿದ್ದು, ತಪ್ಪು ಮಾಹಿತಿ ನೀಡುವ ಮತ್ತು ದಾರಿ ತಪ್ಪಿಸುವ ಜಾಹಿರಾತು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಲಲಿತ್ ನರೇನ್ ಮಿಶ್ರಾ ಅವರು 11 ಲಕ್ಷ ರು, ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 52 ಮತ್ತು ಸೆಕ್ಷನ್ 53  (ತಪ್ಪು ಜಾಹಿರಾತು ಅಥವಾ ದಾರಿ ತಪ್ಪಿಸುವ ಜಾಹಿರಾತು) ಮತ್ತು ಸೆಕ್ಷನ್ 23.1 (1)ರ ಅಡಿಯಲ್ಲಿ ಒಂದು ತಿಂಗಳ ಗಡುವಿನ ಅಂತರದಲ್ಲಿ ದಂಡ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ.

ಅಂತೆಯೇ ಸಂಬಂಧ ಪಟ್ಟ ಜಿಲ್ಲಾ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

2012 ನವೆಂಬರ್ ನಲ್ಲಿ ಪತಂಜಲಿ ಸಂಸ್ಥೆ ವಿರುದ್ಧ ದೂರು ದಾಖಲಾಗಿತ್ತು. ದೂರಿನಲ್ಲಿ ಪತಂಜಲಿ ಸಂಸ್ಥೆ ತನ್ನ ಜಾಹಿರಾತಿನಲ್ಲಿ ಪ್ರಸಾರ ಮಾಡುತ್ತಿರುವಂತೆ ಸಂಸ್ಥೆಯ ಉತ್ಪನ್ನಗಳು ಉನ್ನತ ಗುಣಮಟ್ಟದ್ದೇನೂ ಅಲ್ಲ. ಪತಂಜಲಿ ಸಂಸ್ಥೆಯ ಜೇನುತುಪ್ಪ, ಉಪ್ಪು, ಸಾಸಿವೆ ಎಣ್ಣೆ ಹಾಗೂ ಜಾಮ್ ಅನ್ನು 2012ರ ಆಗಸ್ಟ್ 16ರಂದು ಪರೀಕ್ಷೆಗೊಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಈ ಪದಾರ್ಥಗಳು ಉತ್ತಮ ಗುಣಮಟ್ಟದ್ದಲ್ಲ ಎಂದು ಸಾಬೀತಾಗಿವೆ ಎಂದು ಆರೋಪಿಸಲಾಗಿತ್ತು. ಉತ್ತರಾಖಂಡದ ರುದ್ರಪುರದಲ್ಲಿರುವ ಏಕೈಕ ಎಫ್ ಎಸ್ಎಸ್ಎಐ ಪ್ರಮಾಣೀಕರಿಸಲ್ಪಟ್ಟ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ಪತಂಜಲಿ ಸಂಸ್ಥೆಯ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com