1 ಬಿಲಿಯನ್ ಕ್ಲಬ್ ಸೇರಿದ ವಾಟ್ಸ್ ಅಪ್, ಜಿಮೇಲ್

2 ವರ್ಷಗಳ ಹಿಂದಷ್ಟೇ ಫೇಸ್ ಬುಕ್ ಖರೀದಿಸಿದ್ದ ವಾಟ್ಸ್ ಅಪ್ ಇದೀಗ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಸಾಧನೆಯೊಂದನ್ನು ಮಾಡಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ನ್ಯೂಯಾರ್ಕ್: 2 ವರ್ಷಗಳ ಹಿಂದಷ್ಟೇ ಫೇಸ್ ಬುಕ್ ಖರೀದಿಸಿದ್ದ ವಾಟ್ಸ್ ಅಪ್ ಇದೀಗ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಸಾಧನೆಯೊಂದನ್ನು ಮಾಡಿದೆ.

ಇದೀಗ ವಾಟ್ಸ್ ಅಪ್ ಹಾಗೂ ಜಿಮೇಲ್ ಎರಡೂ 1 ಬಿಲಿಯನ್ ರಷ್ಟು ಬಳಕೆದಾರರನ್ನು ಹೊಂದಿದ್ದು, ಗೂಗಲ್ ಸೇವೆಯಲ್ಲಿ 1 ಬಿಲಿಯನ್ ಬಳಕೆದಾರರನ್ನು ಹೊಂದಿರುವವರಲ್ಲಿ 6ನೇ ಸ್ಥಾನವನ್ನು ಜಿಮೇಲೆ ಪಡೆದಿದೆ. ಇದರಂತೆ ವಾಟ್ಸ್ ಅಪ್ ಕೂಡ ಫೇಸ್ ಬುಕ್ ನ ಎರಡೇ ಅತ್ಯಂತ ಬಳಕೆಯಲ್ಲಿರುವ ಅಪ್ಲಿಕೇಶನ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ವಾರ್ಟ್ ಅಪ್ 1 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಕುರಿತಂತೆ ಮಾರ್ಕ್ ಝಕರ್ ಘೋಷಣೆಯನ್ನು ಮಾಡಿದ್ದು, ವಾಟ್ಸ್ ಅಪ್'ನ ಸಹ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯಾನ್ ಅಕ್ಟನ್  ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

2014ರಲ್ಲಿ ಫೇಸ್'ಬುಕ್ 19 ಬಿಲಿಯನ್ ಡಾಲರ್'ಗೆ ವಾರ್ಟ್ ಅಪ್'ನ್ನು ಖರೀದಿ ಮಾಡಿತ್ತು. ಖರೀದಿಸಿದ ಕೇವಲ 2 ವರ್ಷಗಳಲ್ಲೇ ಇದೀಗ ವಾಟ್ಸ್ ಅಪ್ ಜಗತ್ತಿನ ಅತೀ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com