ಶೀಘ್ರದಲ್ಲೇ ಚಿನ್ನದ ದರ ಏರಿಕೆ ಸಾಧ್ಯತೆ

ಮಹಿಳೆಯರು ಹೆಚ್ಚಾಗಿ ಇಷ್ಟಪಡುವ ಹಳದಿ ಲೋಹ ಚಿನ್ನ ಶೀಘ್ರದಲ್ಲಿಯೇ ತನ್ನ ದರವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ...
ಚಿನ್ನದ ದರ ಏರಿಕೆ ಸಾಧ್ಯತೆ (ಸಂಗ್ರಹ ಚಿತ್ರ)
ಚಿನ್ನದ ದರ ಏರಿಕೆ ಸಾಧ್ಯತೆ (ಸಂಗ್ರಹ ಚಿತ್ರ)

ಮುಂಬೈ: ಮಹಿಳೆಯರು ಹೆಚ್ಚಾಗಿ ಇಷ್ಟಪಡುವ ಹಳದಿ ಲೋಹ ಚಿನ್ನ ಶೀಘ್ರದಲ್ಲಿಯೇ ತನ್ನ ದರವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಮೂರ್ನಾಲ್ಕು ತಿಂಗಳಲ್ಲಿ ಏರಿಳಿಕೆ ಕಂಡಿದ್ದ ಚಿನ್ನ ದರ, ಫೆಬ್ರವರಿ ಬಳಿಕ ಅಗಸದತ್ತ ಮುಖ ಮಾಡುವ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು,  ಸಾಕಷ್ಟು ಪ್ರಮಾಣದಲ್ಲಿ ಹಳದಿ ಲೋಹ ಚೇತರಿಸಿಕೊಂಡಿದೆ. ಇನ್ನು ಇದೇ ಫೆಬ್ರವರಿ 29ರಂದು ಕೇಂದ್ರ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದ್ದು, ಹಳದಿ ಲೋಹದ ಮೇಲಿನ ತೆರಿಗೆಯನ್ನು  ಕೇಂದ್ರಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಹಳದಿ ಲೋಹದ ದರ ಕ್ರಮೇಣ ಏರಿಕೆಯತ್ತ ಸಾಗಿದ್ದು, ಕಳೆದ ಅಕ್ಟೋಬರ್ ನಲ್ಲಿ 28ರಂದು 1,174.50. ಡಾಲರ್ ಗೆ  ಏರಿಕೆಯಾಗಿತ್ತು. ಇದರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಆಗಿದ್ದು, ಕುಸಿತ ಕಂಡಿದ್ದ ಚಿನ್ನದ ದರ ಒಂಬತ್ತು ತಿಂಗಳ ಅತ್ಯಧಿಕ ಮೊತ್ತ ಅಂದರೆ ಪ್ರತೀ 10 ಗ್ರಾಂ ಚಿನ್ನ 27,700  ರುಪಾಯಿಯ ಆಸುಪಾಸಿನಲ್ಲಿತ್ತು.

ಆರ್ಥಿಕ ತಜ್ಞರ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತೀ ಔನ್ಸ್ ಗೆ 1,030 ಡಾಲರ್ ನಿಂದ 1,040 ಡಾಲರ್ ಆಸುಪಾಸಿನಲ್ಲಿತ್ತು. ಬದಲಾದ ಮಾರುಕಟ್ಟೆ ಪರಿಸ್ಥಿತಿಗೆ  ಅನುಗುಣವಾಗಿ ಚಿನ್ನದ ದರ ಇದರ ದುಪ್ಪಟ್ಟಾಗಲಿದ್ದು, ಸುಮಾರು 2,000 ಡಾಲರ್ ಆಸುಪಾಸಿಗೇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಇದರ ಪರಿಣಾಮ ಭಾರತೀಯ ಮಾರುಕಟ್ಟೆ  ಮೇಲೂ ಆಗಲಿದ್ದು, ಚಿನ್ನದ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com