ಕಚ್ಛಾ ತೈಲ ದರ ಪ್ರತೀ ಬ್ಯಾರೆಲ್ ಗೆ 25 ರು. ಏರಿಕೆ

ಏಷ್ಯಾನ್ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಮತ್ತು ಕಚ್ಛಾತೈಲಕ್ಕಾಗಿ ಹೆಚ್ಚಾದ ಬೇಡಿಕೆ ಹಿನ್ನಲೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾತೈಲ ದರದಲ್ಲಿ 25 ರು. ಏರಿಕೆಯಾಗಲಿದೆ.
ಕಚ್ಛಾ ತೈಲ ದರ ಏರಿಕೆ (ಸಂಗ್ರಹ ಚಿತ್ರ)
ಕಚ್ಛಾ ತೈಲ ದರ ಏರಿಕೆ (ಸಂಗ್ರಹ ಚಿತ್ರ)
Updated on

ದುಬೈ: ಏಷ್ಯಾನ್ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಮತ್ತು ಕಚ್ಛಾತೈಲಕ್ಕಾಗಿ ಹೆಚ್ಚಾದ ಬೇಡಿಕೆ ಹಿನ್ನಲೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾತೈಲ ದರದಲ್ಲಿ 25 ರು. ಏರಿಕೆಯಾಗಲಿದೆ.

ಏಷ್ಯನ್ ಷೇರುಮಾರುಕಟ್ಟೆ ಸಕಾರಾತ್ಮಕ ವಹಿವಾಟುಗಳು ಮತ್ತು ಕಚ್ಛಾತೈಲಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಏರಿಕೆಯಾಗಲಿದೆ ಎಂದು  ಹೇಳಲಾಗುತ್ತಿದೆ. ಇನ್ನು ಜೂನ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಕಚ್ಛಾತೈಲಕ್ಕೆ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಈ ಹಿಂದೆ ಸಭೆ ನಡೆಸಿದ್ದ ಇಂಧನ ತಯಾರಿಕಾ ರಾಷ್ಟ್ರಗಳು ದರ ಏರಿಕೆಗೆ  ಬೇಡಿಕೆ ಮುಂದಿಟ್ಟಿದ್ದವು. ಇದೀಗ ಆಗಸ್ಟ್ ತಿಂಗಳವರೆಗಿನ ಬೇಡಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದ ಹಿನ್ನಲೆಯಲ್ಲಿ ಕಚ್ಛಾತೈಲ ದರ ಏರಿಕೆಯಾಗಲಿದೆ.

ಪ್ರಸ್ತುತ 25 ರುಗಳ ಏರಿಕೆಯೊಂದಿಗೆ ಪ್ರತೀ ಬ್ಯಾರೆಲ್ ಕಚ್ಛಾತೈಲ ದರ 3,296ರು. ಗೆ ಏರಿಕೆಯಾಗಲಿದ್ದು, ಆಗಸ್ಚ್ ತಿಂಗಳ ಪೂರೈಕೆ ವೇಳೆ ಕಚ್ಛಾತೈಲ ದರ ಮತ್ತಷ್ಟು ಏರಿಕೆಯಾಗಲಿದೆ ಎಂದು  ತಿಳಿದುಬಂದಿದೆ. ಪ್ರಸ್ತುತ ಪ್ರತೀ ಬ್ಯಾರೆಲ್ ತೈಲ ತರ 3,296 ರು. ಇದ್ದು ಆಗಸ್ಚ್ ತಿಂಗಳಲ್ಲಿ 3,357ರು.ಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಕುರಿತು ನಡೆದ ಬ್ರೆಕ್ಸಿಟ್ ಜನಮತ ಸಂಗ್ರಹ  ಸಂದರ್ಭದಲ್ಲಿ ಯೂರೋಪಿಯನ್ ಪೌಂಡ್ಸ್ ಪಾತಾಳಕ್ಕೆ ಕುಸಿದಿತ್ತು. ಈ ವೇಳೆ ತೈಲ ದರ ಕೂಡ ಗಣನೀಯವಾಗಿ ಇಳಿದಿತ್ತು.

ಬ್ರೆಕ್ಸಿಟ್ ವಿಶ್ವ ಬ್ಯಾಂಕ್ ಮತ್ತು ಆಯಾ ದೇಶಗಳ ಸೆಂಟ್ರಲ್ ಬ್ಯಾಂಕುಗಳ ನೆರವಿನ ಕ್ರಮಗಳಿಂದಾಗಿ ಷೇರುಮಾರುಕಟ್ಟೆ ಚೇತರಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com