ರಾಜನ್ ಎಕ್ಸಿಟ್ ಎಫೆಕ್ಟ್; ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ!
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ 2ನೇ ಅವಧಿಗೆ ತಾವು ಮುಂದುವರೆಯುವುದಿಲ್ಲ ಎಂಬ ರಘುರಾಮ್ ರಾಜನ್ ಅವರ ಹೇಳಿಕೆ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಕುಸಿತಕಂಡಿದ್ದು, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತಕಂಡಿದೆ.
ಆರ್ ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ಮೂರು ವರ್ಷದ ಅವಧಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತಿದ್ದು, ಹಲವು ವಾದ-ವಿವಾದಗಳ ಬಳಿಕ ರಾಜನ್ 2ನೇ ಅವಧಿಗೆ ತಾವು ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಕುಸಿತಗೊಂಡಿದ್ದು, ರುಪಾಯಿ ಮೌಲ್ಯ ಕೂಡ ಶೇ.ರಷ್ಟು ಕುಸಿತಗೊಂಡಿದೆ.
ಈ ಹಿಂದೆ ಪ್ರತೀ ಡಾಲರ್ ಗೆ 67.08ರು ನಷ್ಟಿದ್ದ ರುಪಾಯಿ ಮೌಲ್ಯ ಇದೀಗ 67.68ಕ್ಕೆ ಕುಸಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ರುಪಾಯಿ ಬರೊಬ್ಬರಿ 20 ಅಂಕಗಳನ್ನು ಕಳೆದುಕೊಂಡಿದ್ದು, ರುಪಾಯಿ ಮೌಲ್ಯ 15ರಿಂದ 20 ಪೈಸೆಯಷ್ಟು ಕುಸಿತ ಕಾಣಬಹುದು ಎಂದು ಹೂಡಿಕೆದಾರರು ಮತ್ತು ತಜ್ಞರು ಊಹೆ ಮಾಡಿದ್ದಾರೆ.
ಕುಸಿತ ಕಂಡ ಸೆನ್ಸೆಕ್ಸ್
ಇದೇ ವೇಳೆ ಭಾರತೀಯ ಷೇರುಮಾರುಕಟ್ಟೆ ಮೇಲೂ ರಾಜನ್ ಎಕ್ಸಿಟ್ ವಿಚಾರ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 178 ಅಂಕಗಳ ಕಡಿತಕಂಡಿದೆ. ಬೆಳಗ್ಗೆ 9.30ರ ವೇಳೆಯಲ್ಲಿ ಆರಂಭಿಕ ಕುಸಿತದ ಹೊರತಾಗಿ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಾಣುವ ಮೂಲಕ 26,644.99 ಅಂಕಗಳಿಗೇರಿದೆ. ಇನ್ನು ನಿಫ್ಟಿ ಕೂಡ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿತ್ತಾದರೂ, ಬಳಿಕ 90 ಅಂಕಗಳ ಚೇತರಿಕೆಯೊಂದಿಗೆ 8167.30ಅಂಕಗಳಿಗೇರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ