ಫೋರ್ಬ್ಸ್ ಶ್ರೀಮಂತರ ಪಟ್ಟಿ: ಬಿಲ್ ಗೇಟ್ಸ್ ಗೆ ಅಗ್ರಸ್ಥಾನ, ಮುಖೇಶ್ ಅಂಬಾನಿಗೆ 36ನೇ ಸ್ಥಾನ

ವಿಶ್ವದ ಖ್ಯಾತ ನಿಯತಕಾಲಿಕೆ ಪೋರ್ಬ್ಸ್ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ...
ಫೋರ್ಬ್ ಪಟ್ಟಿಯಲ್ಲಿ ಗೇಟ್ಸ್ ಮತ್ತು ಅಂಬಾನಿ (ಸಂಗ್ರಹ ಚಿತ್ರ)
ಫೋರ್ಬ್ ಪಟ್ಟಿಯಲ್ಲಿ ಗೇಟ್ಸ್ ಮತ್ತು ಅಂಬಾನಿ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ವಿಶ್ವದ ಖ್ಯಾತ ನಿಯತಕಾಲಿಕೆ ಪೋರ್ಬ್ಸ್ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿ  ಮುಂದುವರೆದಿದ್ದಾರೆ.

75 ಬಿಲಿಯನ್ ಡಾಲರ್ ನೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಂದಿನಂತೆ ಬಿಲ್​ಗೇಟ್ಸ್ ಆಗ್ರಸ್ಥಾನದಲ್ಲಿ ಮುಂದುವರೆದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಗೇಟ್ಸ್ ಅವರ ಒಟ್ಟಾರೆ  ಆಸ್ತಿಯಲ್ಲಿ 4.2 ಬಿಲಿಯನ್ ಡಾಲರ್ ಹಣ ಕಡಿತಗೊಂಡಿದೆ. ಎರಡನೇ ಸ್ಥಾನದಲ್ಲಿ ಸ್ಪೈನ್ ಮೂಲದ ದೈತ್ಯ ರಿಟೇಲ್ ಸಂಸ್ಥೆ ಝರಾದ ಸಂಸ್ಥಾಪಕ ಮುಖ್ಯಸ್ಥ ಅಮಾನಿಕೋ ಒರ್ಟೆಗಾ ಮತ್ತು   ಮೂರನೇ ಸ್ಥಾನದಲ್ಲಿ ಬರ್ಕ್ ಶೈರ್ ಹ್ಯಾಥ್ ವೇ ಸಂಸ್ಥೆಯ ಸಿಇಒ ವಾರೆನ್ ಬಫೆಟ್ ಸ್ಥಾನಪಡೆದಿದ್ದಾರೆ.

ಇನ್ನು ಪಟ್ಟಿಯಲ್ಲಿ ಭಾರತದ 84 ಮಂದಿ ಸ್ಥಾನ ಪಡೆದಿದ್ದು, ಭಾರತದ ಕೋಟ್ಯಧಿಪತಿಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಮುಖೇಶ್ ಅಂಬಾನಿ 36ನೇ ಸ್ಥಾನ ಪಡೆದುಕೊಂಡಿದ್ದು,  ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಖೇಶ್ ಬಳಿ 19.3ಬಿಲಿಯನ್ ಡಾಲರ್ ಹಣವಿದೆ ಎಂದು ಫೋರ್ಬ್ಸ್ ಹೇಳಿದೆ. ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಅಮೆರಿಕದ 540 ಮಂದಿ ಸ್ಥಾನ  ಪಡೆದರೆ, ಚೀನಾದ 251, ಜರ್ಮನಿಯ 120 ಉದ್ಯಮಿಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com