ಅಕ್ಷಯ ತೃತೀಯದಂದು ಚಿನ್ನ ವಿನಿಮಯ ಮಾರಾಟ ಅವಧಿ ವಿಸ್ತರಣೆ

ಚಿನ್ನ ವಿನಿಮಯ ಮಾರಾಟ ನಿಧಿ(ಇಟಿಎಫ್)ಯ ವ್ಯಾಪಾರ ಅವಧಿಯನ್ನು ಅಕ್ಷಯ ತೃತೀಯ ದಿನವಾದ ಮೇ 9ರಂದು ಸಾಯಂಕಾಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ಚಿನ್ನ ವಿನಿಮಯ ಮಾರಾಟ ನಿಧಿ(ಇಟಿಎಫ್)ಯ ವ್ಯಾಪಾರ ಅವಧಿಯನ್ನು ಅಕ್ಷಯ ತೃತೀಯ ದಿನವಾದ ಮೇ 9ರಂದು ಸಾಯಂಕಾಲ 7 ಗಂಟೆಯವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರ ಬುಧವಾರ ಘೋಷಿಸಿದೆ.

ದಂತೇರಸ್, ದೀಪಾವಳಿ, ಅಕ್ಷಯ ತೃತೀಯ ದಿವಸಗಳು ಚಿನ್ನ ಖರೀದಿಗೆ ಪ್ರಶಸ್ತ ಸಮಯ ಎಂದು ಭಾರತೀಯರು ಭಾವಿಸುತ್ತಾರೆ.ಚಿನ್ನ ಖರೀದಿಸುವವರ ಸಂಖ್ಯೆ ಈ ದಿನ ಜಾಸ್ತಿ. ಆದುದರಿಂದ ವಹಿವಾಟು ಅವಧಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಅಂದು ಎಂದಿನಂತೆ ಬೆಳಗ್ಗೆ 9.15ರಿಂದ ಅಪರಾಹ್ನ 3.30ರವರೆಗೆ ಷೇರು ವಹಿವಾಟು ನಡೆಯಲಿದೆ. ನಂತರ ಸಾಯಂಕಾಲ 4.30ಕ್ಕೆ ಚಿನ್ನ ವಿನಿಮಯ ವಹಿವಾಟು ಆರಂಭವಾಗಲಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com