ಸಾಲ ಬೇಕಾ? ಹಾಗಾದರೆ ಫೇಸ್ ಬುಕ್, ಲಿಂಕ್ಡ್ ಇನ್ ಸಾಮಾಜಿಕ ಜಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ, ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದ್ದು ಈಗ ಸಾಲ ನೀಡುವ ವಿಷಯದಲ್ಲಿಯೂ ಪ್ರಮುಖವಾದ ಪಾತ್ರ ವಹಿಸುತ್ತಿದೆ!
ಸಾಲ ಬೇಕಾ? ಹಾಗಾದರೆ ಫೇಸ್ ಬುಕ್, ಲಿಂಕ್ಡ್ ಇನ್ ಸಾಮಾಜಿಕ ಜಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ!
ಸಾಲ ಬೇಕಾ? ಹಾಗಾದರೆ ಫೇಸ್ ಬುಕ್, ಲಿಂಕ್ಡ್ ಇನ್ ಸಾಮಾಜಿಕ ಜಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ!

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ, ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದ್ದು ಈಗ ಸಾಲ ನೀಡುವ ವಿಷಯದಲ್ಲಿಯೂ ಪ್ರಮುಖವಾದ ಪಾತ್ರ ವಹಿಸುತ್ತಿದೆ!
ಸಾಲ ನಿಡುವ ಕೆಲವೊಂದು ಏಜೆನ್ಸಿಗಳು ಸಾಲ ಪಡೆಯುವ ವ್ಯಕ್ತಿ ಫೇಸ್ ಬುಕ್, ಲಿಂಕ್ಡ್ ಇನ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೊಂದಿರುವ ಸಂಪರ್ಕ ಹಾಗು ಆತನ ಮಾಹಿತಿಯನ್ನು ಆಧರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಪ್ರಾರಂಭಿಸಿವೆ.
ಆದಾಯ ತೆರಿಗೆ ಇಲಾಖೆ ಫೇಸ್ ಬುಕ್ ಖಾತೆದಾರರ ರಜೆ ದಿನಗಳ ಫೋಟೊಗಳನ್ನು ಪರಿಶೀಲಿಸುವಂತೆ, ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳು ಸಾಲ ನೀಡುವ ವೇಳೆ, ಸಾಲ ಪಡೆಯುವ ವ್ಯಕ್ತಿಗೆ ಸಾಲ ವಾಪಸ್ ನೀಡುವ ಸಾಮರ್ಥ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ಫೇಸ್ ಬುಕ್ ಖಾತೆಯನ್ನು ಪರಿಶೀಲನೆ ನಡೆಸುವ ಪ್ರಕ್ರಿಯೆ ಹೆಚ್ಚಾಗುತ್ತಿದೆ ಎಂದು ಇದಕ್ಕಾಗಿಯೇ ಹೊಸ ಸಾಫ್ಟ್ ವೇರ್ ನ್ನು ಅಭಿವೃದ್ಧಿಪಡಿಸಿರುವ ಕ್ರೆಡಿಟ್ ಮಂತ್ರಿ ಕಂಪನಿಯ ಸಹಸಂಸ್ಥಾಪಕ ರಂಜಿತ್ ಪಂಜಾ ಹೇಳಿದ್ದಾರೆ.
ಪುಣೆ ಮೂಲದ ಸ್ಟಾರ್ಟ್ ಅಪ್ ಆಗಿರುವ ಅರ್ಲಿ ಸ್ಯಾಲರಿ(EarlySalary) ಸಾಲ ನೀಡುವುದಕ್ಕೂ ಮುನ್ನ ಸಾಲ ಪಡೆಯುತ್ತಿರುವ ವ್ಯಕ್ತಿಯ ಸಾಮಾಜಿಕ ಜಾಲತಾಣಗಳ ಸಂಪರ್ಕವನ್ನು ಸಂಪೂರ್ಣವಾಗಿ ತಿಳಿಯಲು ಕ್ರೆಡಿಟ್ ಮಂತ್ರಿ ಅಭಿವೃದ್ಧಿಪಡಿಸಿರುವ ಸಾಫ್ಟ್ ವೇರ್ ಸಹಕಾರಿಯಾಗಲಿದೆ. 90 ದಿನಗಳ ಕಾರ್ಯನಿರ್ವಹಣೆ ಅವಧಿಯಲ್ಲಿ ಅರ್ಲಿ ಸ್ಯಾಲರಿ, ಬೆಂಗಳೂರು, ಚೆನ್ನೈ, ಪುಣೆಯಿಂದ 1 ,000 ಕ್ಕೂ ಹೆಚ್ಚು ಜನರಿಂದ ಅರ್ಜಿ ಪಡೆದಿದ್ದು ಒಟ್ಟು 1.4  ಕೋಟಿ ರೂ ನಷ್ಟು ಮೊತ್ತದ ಸಾಲಕ್ಕಾಗಿ ಬೇಡಿಕೆಯನ್ನು ಪರಿಶೀಲನೆ ನಡೆಸಿದೆ. ಹೊಸದಾಗಿ ಕೆಲಸಕ್ಕೆ ಸೇರಿ ಹಣದ ಅವಶ್ಯಕತೆ ಎದುರಿಸುತ್ತಿರುವ ಯುವಕರಿಗೆ ಸಾಲ ನೀಡುವುದು ಅರ್ಲಿ ಸ್ಯಾಲರಿಯ ಮುಖ್ಯ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com