ಪ್ರತಿಯೊಬ್ಬ ಭಾರತೀಯನ ಸಬಲೀಕರಣವನ್ನು ಮೈಕ್ರೋಸಾಫ್ಟ್ ಬಯಸುತ್ತದೆ: ಸತ್ಯ ನಡೆಲ್ಲಾ

ಭಾರತದ ಪ್ರತಿಯೊಬ್ಬ ನಾಗರಿಕರನ್ನು ಮತ್ತು ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಮೈಕ್ರೋಸಾಫ್ಟ್ ನ ಮುಖ್ಯ ...
ಸತ್ಯ ನಡೆಲ್ಲಾ(ಸಂಗ್ರಹ ಚಿತ್ರ)
ಸತ್ಯ ನಡೆಲ್ಲಾ(ಸಂಗ್ರಹ ಚಿತ್ರ)

ನವದೆಹಲಿ: ಭಾರತದ ಪ್ರತಿಯೊಬ್ಬ ನಾಗರಿಕರನ್ನು ಮತ್ತು ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಮೈಕ್ರೋಸಾಫ್ಟ್ ನ ಮುಖ್ಯ ಗುರಿಯಾಗಿದೆ. ಆ ಮೂಲಕ ಭಾರತೀಯರು ತಮ್ಮ ಸ್ವಂತಕ್ಕಾಗಿ ಮತ್ತು ದೇಶದ ಅಭಿವೃದ್ಧಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಸಾಧನೆ ಮಾಡಬಹುದು ಎಂದು ಅಮೆರಿಕದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ನ ಮುಖ್ಯ ಕಾರ್ಯನಿರ್ವಾಹಕ ಸತ್ಯ ನಡೆಲ್ಲಾ ಹೇಳಿದ್ದಾರೆ.

ನಾನಿಲ್ಲಿಗೆ ಪ್ರತಿ ಬಾರಿ ಬಂದು ಹೋಗುವಾಗ ತುಂಬ ಉತ್ಸಾಹದಿಂದ ಹಿಂತಿರುಗುತ್ತೇನೆ. ಇಲ್ಲಿನ ಜನರ ಸ್ವಂತಿಕೆ ನೋಡಿ ತುಂಬಾ ಖುಷಿಯಾಗುತ್ತದೆ. ದೊಡ್ಡ ದೊಡ್ಡದನ್ನು ಕನಸು ಕಾಣುತ್ತಾ ದೊಡ್ಡ ಸಾಧನೆ ಮಾಡುವುದು ಮುಖ್ಯ ಎಂದು ಅವರು ಮಾಧ್ಯಮದ ಮುಂದೆ ಮಾತನಾಡುತ್ತಾ ಹೇಳಿದರು. ಅವರು ದೆಹಲಿಯಲ್ಲಿ ಮೈಕ್ರೋಸಾಫ್ಟ್ ಅಭಿವರ್ಧಕರು, ಉದ್ಯಮಶೀಲರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನನಗೆ ವಿದ್ಯಾರ್ಥಿಯಾಗಿದ್ದಾಗ ಎರಡು ವಿಷಯಗಳು ಬಹಳ ನೆಚ್ಚಿನದ್ದಾಗಿದ್ದವು. ಅವು ಕವನ ಮತ್ತು ಕಂಪ್ಯೂಟರ್ ವಿಜ್ಞಾನ. ಅವೆರಡು ವಿಷಯಗಳು ನನ್ನ ಕನಸನ್ನು ಜೀವನದಲ್ಲಿ ನನಸಾಗುವಂತೆ ಪ್ರೇರೇಪಿಸಿದ್ದವು ಎಂದ ನಡೆಲ್ಲಾ 19ನೇ ಶತಮಾನದ ಖ್ಯಾತ ಉರ್ದು ಮತ್ತು ಪರ್ಷಿಯನ್ ಕವಿ ಮಿರ್ಜಾ ಗಲೀಬ್ ಅವರ ಪದ್ಯವನ್ನು ಹೇಳುವ ಮೂಲಕ ಮಾತು ಆರಂಭಿಸಿದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಮಾತನಾಡಿ, ಭಾರತದ ಬೆಳವಣಿಗೆಗೆ ಮೈಕ್ರೋಸಾಫ್ಟ್ ಒಂದು ವೇದಿಕೆ ಎಂದರು.

ನಡೆಲ್ಲಾ ಅವರತ್ತ ನೋಡಿ ಹೇಳಿದ ಸಚಿವರು, ಸೀಟ್ಲ್, ನ್ಯೂಯಾರ್ಕ್, ಲಂಡನ್ ನಲ್ಲಿ ಮಾಡುವ ಸಂಶೋಧನೆಗಳು ಹಝರಿಬಾಗ್ ನಲ್ಲಿರುವ ಜಂಡಾ ಚೌಕ್ ನಲ್ಲಿ ಉಪಯೋಗವಾಗದು. (ಸಿನ್ಹಾ ಅವರ ಸ್ವಕ್ಷೇತ್ರ ಜಂಡಾ ಚೌಕ್), ಭಾರತ ದೇಶಕ್ಕೆ ಭಾರತದಲ್ಲಿಯೇ ನಾವು ಸಂಶೋಧನೆ ಮಾಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com