2016 ನೇ ಸಾಲಿನಲ್ಲಿ ಕುಸಿದ ಚಿನ್ನದ ಬೇಡಿಕೆ: 7 ವರ್ಷಗಳಲ್ಲಿ ದಾಖಲೆಯ ಕುಸಿತ

ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಶೇ.24ರಷ್ಟು ಬೇಡಿಕೆ ಕುಸಿದಿದ್ದು, ಕಳೆದ 7 ವರ್ಷಗಳಲ್ಲೇ ದಾಖಲೆಯ ಕುಸಿತ ಎಂದು ಹೇಳಲಾಗುತ್ತಿದೆ.
2016 ನೇ ಸಾಲಿನಲ್ಲಿ ಕುಸಿದ ಚಿನ್ನದ ಬೇಡಿಕೆ: 7 ವರ್ಷಗಳಲ್ಲಿ ದಾಖಲೆಯ ಕುಸಿತ
2016 ನೇ ಸಾಲಿನಲ್ಲಿ ಕುಸಿದ ಚಿನ್ನದ ಬೇಡಿಕೆ: 7 ವರ್ಷಗಳಲ್ಲಿ ದಾಖಲೆಯ ಕುಸಿತ
ಮುಂಬೈ: ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ.  ಶೇ.24ರಷ್ಟು ಬೇಡಿಕೆ ಕುಸಿದಿದ್ದು, ಕಳೆದ 7 ವರ್ಷಗಳಲ್ಲೇ ದಾಖಲೆಯ ಕುಸಿತ ಎಂದು ಹೇಳಲಾಗುತ್ತಿದೆ. 
ದರ ಏರಿಕೆ ಹಾಗೂ ಚಿನ್ನದ ಖರೀದಿಯಲ್ಲಿ ಪಾರದರ್ಶಕತೆ ತರಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದ್ದು ಕಳ್ಳಸಾಗಣೆ ಹೆಚ್ಚಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತಿಳಿಸಿದೆ. ವಿಶ್ವದ ಎರಡನೇ ಅತಿ ಹೆಚ್ಚು ಚಿನ್ನದ ಬಳಕೆದಾರ ರಾಷ್ಟ್ರ ಭಾರತದಲ್ಲಿ ಕಡಿಮೆ ಬೇಡಿಕೆ ಇದ್ದು, ಜಾಗತಿಕ ಮಟ್ಟದಲ್ಲಿ  ಚಿನ್ನದಬೆಲೆ(ಸ್ಪಾಟ್ ಚಿನ್ನ) ಕುಸಿತಕ್ಕೆ ಕಾರಣವಾಗಲಿದೆ ಎಂದು ಡಬ್ಲ್ಯೂಜಿಸಿ ಹೇಳಿದೆ. 
2016 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚಿನ್ನದ ಬೆಡಿಕೆ ಕುಸಿದಿದ್ದು, 2009ರಿಂದ ಇದೇ ಮೊದಲ ಬಾರಿಗೆ 650-750 ಟನ್ ಗಳಿಗೆ ಕುಸಿದಿದೆ. ಮೂರನೇ ತ್ರೈಮಾಸಿಕದಲ್ಲಿ ಚಿನ್ನ ಕಳ್ಳಸಾಗಣೆ ಮಾಡುವವರು ಅತಿ ಹೆಚ್ಚು ರಿಯಾಯಿತಿ ದರದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದರು ಎಂದು ಡಬ್ಲ್ಯೂಜಿಸಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com