ಏಪ್ರಿಲ್-ಅಕ್ಟೋಬರ್ ನಲ್ಲಿ ವಿತ್ತೀಯ ಕೊರತೆ ₹ 4.24 ಲಕ್ಷ ಕೋಟಿ

2016-17 ನೇ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೊಬರ್ ನಲ್ಲಿ ವಿತ್ತೀಯ ಕೊರತೆ ₹ 4.24 ಲಕ್ಷ ಕೋಟಿಗಳಾಗಿವೆ.
ವಿತ್ತೀಯ ಕೊರತೆ(ಸಂಗ್ರಹ ಚಿತ್ರ)
ವಿತ್ತೀಯ ಕೊರತೆ(ಸಂಗ್ರಹ ಚಿತ್ರ)
ನವದೆಹಲಿ: 2016-17 ನೇ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೊಬರ್ ನಲ್ಲಿ ವಿತ್ತೀಯ ಕೊರತೆ  ₹ 4.24 ಲಕ್ಷ ಕೋಟಿಗಳಾಗಿವೆ. 
ವಿತ್ತೀಯ ಕೊರತೆ (ವರಮಾನ ಮತ್ತು ವೆಚ್ಚದ ನಡುವಿನ ಅಂತರ) ಶೇ.79.3 ಕ್ಕೆ ತಲುಪಿದೆ. 2016–17ಕ್ಕೆ ₹5.33 ಲಕ್ಷ ಕೋಟಿಗಳಷ್ಟು (ಶೇ 3.5) ವಿತ್ತೀಯ ಕೊರತೆಯನ್ನು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿದೆ.  
2016–17ನೇ ಆರ್ಥಿಕ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ದೇಶದ ವಿತ್ತೀಯ ಕೊರತೆಯು (ವರಮಾನ ಮತ್ತು ವೆಚ್ಚದ ನಡುವಿನ ಅಂತರ) ₹1.37 ಲಕ್ಷ ಕೋಟಿಗಳಷ್ಟಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇನ್ನು ಪರಿಶೀಲನೆಯಲ್ಲಿರುವ ಅವಧಿಯ ಆದಾಯ ಕೊರತೆ 3.28 ಲಕ್ಷ ಕೋಟಿಯಷ್ಟಿದೆ ಅಂದರೆ ಬಜೆಟ್ ನ ಅಂದಾಜಿನ ಶೇ.92.6 ರಷ್ಟಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com