ಮುಂಬೈ: ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಗಿದ್ದು, ಮಧ್ಯಂತರ ಅಧ್ಯಕ್ಷರಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ. .ಟಾಟಾ ಸಮೂಹ ಸಂಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಲಾಗಿದ್ದು, ಮಿಸ್ತ್ರಿ ಅವರನ್ನು ವಜಾ ಮಾಡಿ ಅವರ ಜಾಗಕ್ಕೆ ರತನ್ ಟಾಟಾ ಅವರನ್ನು ಮುಂದುವರೆಸುವುದಾಗಿ ತೀರ್ಮಾನಿಸಲಾಗಿದೆ. .ಇನ್ನು ರತನ್ ಟಾಟಾ ಅವರು ನಾಲ್ಕು ತಿಂಗಳ ಕಾಲವಧಿಗೆ ಟಾಟಾ ಸಮೂಹದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು ಅಷ್ಟರೊಳಗೆ ಆಯ್ಕೆ ಸಮಿತಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. .ಸೈರಸ್ ಮಿಸ್ತ್ರಿ ಅವರು 2012ರ ಡಿಸೆಂಬರ್ 29 ರಂದು ರತನ್ ಟಾಟಾ ಬದಲಿಗೆ ಟಾಟಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics