ತಮ್ಮನ್ನು ಸಮರ್ಕೊಥಿಸಿಕೊಳ್ಳಲು ಅವಕಾಶ ನೀಡಲಿಲ್ಲ; ಇ ಮೇಲ್ ಮೂಲಕ ಉತ್ತರಿಸಿದ ಸೈರಸ್ ಮಿಸ್ತ್ರಿ

ಟಾಟಾ ಸನ್ಸ್ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಯವರನ್ನು ರತನ್ ಟಾಟಾ ಬದಲಾವಣೆ ಮಾಡಿದ ಎರಡು...
ರತನ್ ಟಾಟಾ-ಸೈರಸ್ ಮಿಸ್ತ್ರಿ(ಸಂಗ್ರಹ ಚಿತ್ರ)
ರತನ್ ಟಾಟಾ-ಸೈರಸ್ ಮಿಸ್ತ್ರಿ(ಸಂಗ್ರಹ ಚಿತ್ರ)
ನವದೆಹಲಿ: ಟಾಟಾ ಸನ್ಸ್ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಯವರನ್ನು ರತನ್ ಟಾಟಾ ಬದಲಾವಣೆ ಮಾಡಿದ ಎರಡು ದಿನಗಳ ನಂತರ ಮಂಡಳಿಯ ಸದಸ್ಯರಿಗೆ ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿರುವ ಸೈರಸ್ ಮಿಸ್ತ್ರಿ, ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿರುವುದು ಆಘಾತ ಮತ್ತು ಅಚ್ಚರಿಯನ್ನುಂಟುಮಾಡಿದೆ ಎಂದು ಹೇಳಿದ್ದಾರೆ. 
ಮಿಸ್ತ್ರಿಯವರು ತಮ್ಮ ಇ ಮೇಲ್ ನಲ್ಲಿ, ಮಂಡಳಿಯು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅವಕಾಶವನ್ನು ನೀಡಲೇ ಇಲ್ಲ ಎಂದು ಆರೋಪಿಸಿದ್ದಾರೆ. ಅವರು ಇಂದು ಬೆಳಗ್ಗೆ ಟಾಟಾದ ಕೇಂದ್ರ ಕಚೇರಿ ಬಾಂಬೆ ಹೌಸ್ ಗೆ ಪ್ರವೇಶಿಸಿದ್ದರು.
ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಮಿಸ್ತ್ರಿಯವರು ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆದು ಹಾಕಿರುವ ಕ್ರಮವನ್ನು ಕಾನೂನುಬಾಹಿರ ಎಂದು ಹೇಳಿದ್ದಾರೆ. ಟಾಟಾ ಗ್ರೂಪ್ ನ ನಿಯಮ ಪ್ರಕಾರ, ತಮಗೆ 15 ದಿನಗಳ ನೊಟೀಸ್ ಸಮಯ ನೀಡಬೇಕಾಗಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ಕಾರ್ಪೊರೇಟ್ ಜಗತ್ತಿಗೆ ಆಘಾತವನ್ನುಂಟುಮಾಡುವ ರೀತಿಯಲ್ಲಿ ಸಿರಸ್ ಮಿಸ್ತ್ರಿಯವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿರುವುದು ಭಾರೀ ಚರ್ಚೆ, ಊಹಾಪೋಹಗಳಿಗೆ ಕಾರಣವಾಗಿದ್ದು ಕಾನೂನು ಹೋರಾಟಕ್ಕೆ ನಾಂದಿ ಹಾಡಬಹುದು ಎನ್ನಲಾಗುತ್ತಿದೆ.
ಟಾಟಾ ಕಂಪೆನಿ ತನ್ನ ಅಧಿಕೃತ ವೆಬ್ ಸೈಟ್ ನಿಂದ ಮಿಸ್ತ್ರಿಗೆ ಉಲ್ಲೇಖಗಳನ್ನು ತೆಗೆದುಹಾಕಿದೆ.
ಕಳೆದ ಎರಡು ದಿನಗಳ ಬೆಳವಣಿಗೆ ಬಗ್ಗೆ ರತನ್ ಟಾಟಾ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಘಟನೆ ಬಗ್ಗೆ ವಿವರಿಸಲು ಮಿಸ್ತ್ರಿಯವರು ಪ್ರಧಾನಿ ಬಳಿ ಸಮಯ ಕೋರಿದ್ದಾರೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com