ಮಿಸ್ತ್ರಿ ಆರೋಪ ಕುರಿತು ವಿವರ ನೀಡುವಂತೆ ಟಾಟಾಗೆ ಬಿಎಸ್ಇ, ಎನ್ಎಸ್ಇ ಪತ್ರ

ಟಾಟಾ ಸಂಸ್ಥೆಯಲ್ಲಿ ಆಂತರಿಕ ಕಲಹದ ಕುರಿತು ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಪತ್ರ ಬೆನ್ನಲ್ಲೇ ಟಾಟಾ ಸಂಸ್ಥೆಗೆ ಮತ್ತೊಂದು ಮುಖಭಂಗ ಎದುರಾಗಿದ್ದು, ಪತ್ರದಲ್ಲಿನ ಮಿಸ್ತ್ರಿ ಆರೋಪಗಳ ಕುರಿತಂತೆ ವಿವರ ನೀಡುವಂತೆ ಮುಂಬೈ ಹಾಗೂ ರಾಷ್ಟ್ರೀಯ ಷೇರುಪೇಟೆ ಪತ್ರ ಬರೆದಿದೆ.
ಸೈರಸ್ ಮಿಸ್ತ್ರಿ ಹಾಗೂ ರತನ್ ಟಾಟಾ (ಸಂಗ್ರಹ ಚಿತ್ರ)
ಸೈರಸ್ ಮಿಸ್ತ್ರಿ ಹಾಗೂ ರತನ್ ಟಾಟಾ (ಸಂಗ್ರಹ ಚಿತ್ರ)

ಮುಂಬೈ: ಟಾಟಾ ಸಂಸ್ಥೆಯಲ್ಲಿ ಆಂತರಿಕ ಕಲಹದ ಕುರಿತು ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಪತ್ರ ಬೆನ್ನಲ್ಲೇ ಟಾಟಾ ಸಂಸ್ಥೆಗೆ ಮತ್ತೊಂದು ಮುಖಭಂಗ ಎದುರಾಗಿದ್ದು, ಪತ್ರದಲ್ಲಿನ ಮಿಸ್ತ್ರಿ  ಆರೋಪಗಳ ಕುರಿತಂತೆ ವಿವರ ನೀಡುವಂತೆ ಮುಂಬೈ ಹಾಗೂ ರಾಷ್ಟ್ರೀಯ ಷೇರುಪೇಟೆ ಪತ್ರ ಬರೆದಿದೆ.

ಟಾಟಾ ಸಂಸ್ಥೆಯ ಸಂಪತ್ತು ಕುಸಿತವಾಗುತ್ತಿರುವ ಕುರಿತಂತೆ ಪತ್ರದಲ್ಲಿ ಸೈರಸ್ ಮಿಸ್ತ್ರಿ ಆರೋಪಿಸಿದ್ದರ ಕುರಿತು ವಿವರ ನೀಡಬೇಕು ಎಂದು ಮುಂಬೈ (ಬಿಎಸ್‌ಇ) ಮತ್ತು ರಾಷ್ಟ್ರೀಯ  ಷೇರುಪೇಟೆಗಳು (ಎನ್‌ಎಸ್‌ಇ) ಟಾಟಾ ಸಮೂಹದ ಹಲವಾರು ಸಂಸ್ಥೆಗಳಿಗೆ ಪತ್ರ ಬರೆದಿವೆ. ಸಂಪತ್ತು ಕುಸಿತವಾಗುವ ಸಾಧ್ಯತೆ ಬಗ್ಗೆ ಮಾಜಿ ಅಧ್ಯಕ್ಷ ಮಿಸ್ತ್ರಿ ಅವರು ಮಾಡಿರುವ ಆರೋಪಗಳ  ಬಗ್ಗೆ  ವಿವರಣೆ ನೀಡಬೇಕು ಎಂದು ಟಾಟಾ ಮೋಟಾರ್ಸ್‌, ಇಂಡಿಯನ್‌ ಹೋಟೆಲ್‌, ಟಾಟಾ ಟೆಲಿ ಸರ್ವಿಸಸ್‌ ಮತ್ತು ಟಾಟಾ ಪವರ್‌ ಸಂಸ್ಥೆಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು  ಎಂದು ಸೂಚಿಸಲಾಗಿದೆ.

ಟಾಟಾ ಸಂಸ್ಥೆಯಿಂದ ತಮ್ಮನ್ನು ವಜಾ ಮಾಡಿದ ಬೆನ್ನಲ್ಲೇ ಸಂಸ್ಥೆಯ ನಿರ್ದೇಶಕ ಮಂಡಳಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದ ಸೈರಸ್ ಮಿಸ್ತ್ರಿ, ಸಂಸ್ಥೆಯ ಆಡಳಿತದಲ್ಲಿ ಟಾಟಾ ಕುಟುಂಬದ  ಹಸ್ತಕ್ಷೇಪ ಹಾಗೂ ಭಾವಾನಾತ್ಮಕ ಸಂಬಂಧಗಳಿಂದ ಸಂಸ್ಥೆಗೆ ಆಗುತ್ತಿರುವ ನಷ್ಟದ ಬಗ್ಗೆ ವಿವರ ನೀಡಿದ್ದರು. ಅಲ್ಲದೆ ಹಿಂದಿನ ಅಧ್ಯಕ್ಷರಿಂದ ಬಳುವಳಿಯಾಗಿ ಬಂದಿದ್ದ ಐದು ಲಾಭದಾಯಕವಲ್ಲದ  ಉದ್ದಿಮೆಗಳಿಂದ ಟಾಟಾ ಸಮೂಹದ ಸಂಪತ್ತು ರು,1.18 ಲಕ್ಷ ಕೋಟಿಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಮಿಸ್ತ್ರಿ ಎಚ್ಚರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com