ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇಖಡ 0.2ರಷ್ಟು ವೇತನ ಹೆಚ್ಚಳವಾಗಿದ್ದರೆ, ದೇಶಿಯ ಉತ್ಪನ್ನ(ಜಿಡಿಪಿ) ಗಳಿಕೆ ಶೇ 63.8ರಷ್ಟು ದಾಖಲಾಗಿದೆ ಎಂದು ಕಾರ್ನ್ ಫೆರ್ರಿಯ ಹಾಯ್ ಗ್ರೂಪ್ ಹೇಳಿದ್ದಾರೆ.
ಈ ಅವಧಿಯಲ್ಲಿ ಭಾರತ ಅಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದರೆ, ಇದೇ ಅವಧಿಯಲ್ಲಿ ಚೀನಾ ಶೇ. 10.6ರಷ್ಟು ವೇತನ ಹೆಚ್ಚಳ ಮಾಡಿದೆ ಎಂದು ಕಾರ್ನ್ ಫೆರ್ರಿಯ ಹಾಯ್ ಗ್ರೂಪ್ ವಿಶ್ಲೇಷಿಸಿದೆ.
ಇಂಡೋನೇಷಿಯಾದಲ್ಲಿ ಶೇ 9.3 ಹಾಗೂ ಮೆಕ್ಸಿಕೋದಲ್ಲಿ ಶೇ 8.9ರಷ್ಟು ವೇತನ ಹೆಚ್ಚಳವಾಗಿದ್ದರೆ, ಟರ್ಕಿಯಲ್ಲಿ ಶೇ -34.4, ರಷ್ಯಾದಲ್ಲಿ ಶೇ -17.1 ರಷ್ಟು ಪ್ರಮಾಣದಲ್ಲಿ ಕ್ಷಿಣಿಸಿದೆ. ಇನ್ನು ಇದೇ ದಾರಿಯಲ್ಲಿ ಬ್ರೆಜಿಲ್ ಹಾಗೂ ಅರ್ಜೆಂಟಿನಾ ಇದ್ದು ವೇತನ ಹೆಚ್ಚಳ ಋಣಾತ್ಮಕ ಪ್ರಮಾಣದಲ್ಲಿದೆ.