ಪ್ರತಿದಿನ ತೈಲ ಬೆಲೆ ಪರಿಷ್ಕರಣೆ: ಆಗುವ ಲಾಭಗಳೇನು? ಇಲ್ಲಿದೆ 5 ಪ್ರಮುಖ ಅಂಶಗಳು

ವಿಶ್ವದ ಪ್ರಮುಖ ದೇಶಗಳಂತೆ ಇದೀಗ ಭಾರತದಲ್ಲೂ ಪ್ರತಿದಿನ ಪೆಟ್ರೋಲ್, ಡೀಸೆಲ್‌ ಖರೀದಿಸುವ ಗ್ರಾಹಕರು ಹೊಸ ಬೆಲೆಯನ್ನು ತೆರಬೇಕಾಗುತ್ತದೆ. ಅಂದರೆ ಇನ್ಮುಂದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಶ್ವದ ಪ್ರಮುಖ ದೇಶಗಳಂತೆ ಇದೀಗ ಭಾರತದಲ್ಲೂ ಪ್ರತಿದಿನ ಪೆಟ್ರೋಲ್, ಡೀಸೆಲ್‌ ಖರೀದಿಸುವ ಗ್ರಾಹಕರು ಹೊಸ ಬೆಲೆಯನ್ನು ತೆರಬೇಕಾಗುತ್ತದೆ. ಅಂದರೆ ಇನ್ಮುಂದೆ ಪ್ರತಿದಿನ ತೈಲ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ.  ಬರುವ ಮೇ 1 ರಿಂದ ಗ್ರಾಹಕರು ಪೆಟ್ರೋಲ್, ಡೀಸೆಲ್ ಖರೀದಿಸಬೇಕಾದಲ್ಲಿ ಅಂದಿನ ಹೊಸ ದರವನ್ನೇ ಪಾವತಿಸಿ ಖರೀದಿಸಬೇಕಾಗುತ್ತದೆ. ಪ್ರತಿದಿನ ತೈಲಬೆಲ ಪರಿಷ್ಕರಣೆಯಿಂದ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕೆಲ ಮಾಹಿತಿಗಳು ಇಲ್ಲಿವೆ. 
ಪ್ರಸಕ್ತವಾಗಿ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ.ಈ ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಯಾಗುತ್ತಿತ್ತು. 
ಈಗ 15 ದಿನಗಳಿಗೊಮ್ಮೆ ತೈಲ ಬೆಲೆ ಪರಿಷ್ಕರಣೆ ಮಾಡುವ ವೇಳೆ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾಗುತ್ತಿತ್ತು, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತಿತ್ತು.. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ. ಸರ್ಕಾರದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ.
ಪುದುಚೆರಿ, ವಿಶಾಖಪಟ್ಟಣಂ, ಉದಯ್ ಪುರ್ , ಜೆಮ್ ಶೆಡ್ ಪುರ ಮತ್ತು ಚಂಡಿಗಡದಲ್ಲಿ ನಗರಗಳಲ್ಲಿ ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಮಾಡುವ ಕಾರ್ಯವನ್ನು ಮೊದಲಿಗೆ ಅನುಷ್ಠಾನಗೊಳಿಸಲಾಗುತ್ತದೆ.
ಪ್ರತಿದಿನ ತೈಲಬೆಲೆ ಪರಿಷ್ಕರಣೆ ಖಾಸಗಿ ಪೆಟ್ರೋಲ್ ಪಂಪ್ ಗಳಿಗೆ ಅನ್ವಯಿಸುವುದಿಲ್ಲವೆ ಎಂಬ ಪ್ರಶ್ನೆ ಮೂಡುವುದು ಸಹಜ, ಆದರೆ ಇದರ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ, ರಿಲಾಯಾನ್ಸ್ ಮತ್ತು ಎಸ್ಸಾರ್ ಆಯಿಲ್ ಕಂಪನಿಗಳು ಆಯಾ ರಾಜ್ಯದ ನೀತಿ ನಿಯಮಗಳನುಸಾರ ನಡೆದುಕೊಳ್ಳುಬೇಕಾಗುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲದರದಲ್ಲಿ ಇಳಿಕೆ ಅಥವಾ ಏರಿಕೆಯಾದರೂ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com