ಇನ್ಫೋಸಿಸ್: ಷೇರುದಾರರಿಗೆ 2 ಶತಕೋಟಿ ಡಾಲರ್ ಹಿಂತಿರುಗಿಸಲು ನಿರ್ಧಾರ

ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ರಫ್ತು ಕಂಪೆನಿ ಇನ್ಫೋಸಿಸ್ ಲಿಮಿಟೆಡ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ/ಬೆಂಗಳೂರು: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ರಫ್ತು ಕಂಪೆನಿ ಇನ್ಫೋಸಿಸ್ ಲಿಮಿಟೆಡ್(ಇನ್ಫಿ.ಎನ್ಎಸ್), ತಾನು ಷೇರಿನಲ್ಲಿ 2 ಡಾಲರ್ ಶತಕೋಟಿ ಹಿಂತಿರುಗಿಸುವುದಾಗಿ ಹೇಳಿದೆ.
ಇನ್ಫೋಸಿಸ್ ಮಂಡಳಿಯ ಸ್ವತಂತ್ರ ನಿರ್ದೇಶಕ ರವಿ ವೆಂಕಟೇಶನ್ ಅವರನ್ನು ಸಹ ಅಧ್ಯಕ್ಷರಾಗಿ ನೇಮಕ ಮಾಡಿರುವುದಾಗಿಯೂ ಘೋಷಿಸಿದೆ. ಸಂಸ್ಥಾಪಕರ ಸಾಂಸ್ಥಿಕ ಆಡಳಿತದ ಕಾಳಜಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಎನ್ನಲಾಗಿದೆ. 
ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿಯ ಕೆಲ ಸ್ಥಾಪಕರು ಮತ್ತು ಮಾಜಿ ಕಾರ್ಯಕಾರಿಗಳು ಸಾರ್ವಜನಿಕವಾಗಿ ಇತ್ತೀಚೆಗೆ ಮಂಡಳಿಯ ಆಡಳಿತದ ಬಗ್ಗೆ ಆರೋಪ ಮಾಡಿದ್ದರು. ಕೆಲವು ಲೋಪದೋಷಗಳನ್ನು ಹೇಳಿದ್ದರು. ತನ್ನ ಪ್ರತಿಸ್ಪರ್ಧಿ ಟಾಟಾ ಕಲ್ಸಲ್ಟೆನ್ಸಿ ಸರ್ವಿಸಸ್ ನ್ನು ಅನುಸರಿಸುವಂತೆಯೂ ಸೂಚಿಸಿದರು. ಇನ್ಫೋಸಿಸ್ ಫೆಬ್ರವರಿಯಲ್ಲಿ 2.4 ಶತಕೋಟಿ ಡಾಲರ್ ಷೇರು ಮರುಖರೀದಿಯನ್ನು ಘೋಷಿಸಿದೆ.
ಮುಂದಿನ ಹಣಕಾಸು ವರ್ಷ ಮುಗಿಯುವುದರೊಳಗೆ 130 ಶತಕೋಟಿ ರೂಪಾಯಿಗಳಷ್ಟನ್ನು ಷೇರುದಾರರಿಗೆ ಹಿಂತಿರುಗಿಸಲಾಗುವುದು. ಈ ಬಗ್ಗೆ ಮಂಡಳಿ ತೀರ್ಮಾನಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇನ್ಫೋಸಿಸ್ ಷೇರು ಇಂದು ಬೆಳಗಿನ ವಹಿವಾಟಿನಲ್ಲಿ ಶೇಕಡಾ 2.4ರಷ್ಟು ಇಳಿಕೆ ಕಂಡುಬಂದಿದೆ. ಕಳೆದ ಮೂರು ತಿಂಗಳ ಕ್ರೋಡೀಕೃತ ನಿವ್ವಳ ಲಾಭದಲ್ಲಿ 36.03 ಶತಕೋಟಿ ಬಂದಿದೆ. ಆದಾಯ 3.4ರಷ್ಟು ಏರಿಕೆಯಾಗಿ 171.20 ಶಕಕೋಟಿಯಷ್ಟಾಗಿದೆ.
ಥಾಮ್ಸನ್ ರಾಯ್ ಟರ್ಸ್ ಅಂಕಿಅಂಶ ಪ್ರಕಾರ, ಸರಾಸರಿ ಕ್ರೋಢೀಕೃತ ಲಾಭ 35.67 ಶತಕೋಟಿಯಾಗಿದ್ದು, 2017-18ರಲ್ಲಿ ಕಂಪೆನಿ ಶೇಕಡಾ 6.5ರಷ್ಟು ಆದಾಯ ತರುವ ನಿರೀಕ್ಷೆಯಿದೆ  ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com