ಕಾರ್ಮಿಕರಿಗೆ ಸಂತಸದ ಸುದ್ದಿ: ಇನ್ನು ಮುಂದೆ ನೌಕರಿ ಜೊತೆಗೆ ಪಿಎಫ್ ಖಾತೆಯೂ ವರ್ಗಾವಣೆ

ಮುಂದಿನ ದಿನಗಳಲ್ಲಿ ನೀವು ಉದ್ಯೋಗ ಬದಲಾಯಿಸಿದರೇ ಪಿಎಫ್ ಬಗ್ಗೆ ಯೋಚಿಸುವಂತಿಲ್ಲ, ಏಕೆಂದರೇ ಇನ್ನು ಮುಂದೆ ನಿಮ್ಮ ನೌಕರಿಯ ಜೊತೆಗೆ, ನಿಮ್ಮ ಪಿಎಫ್ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ:  ಮುಂದಿನ ದಿನಗಳಲ್ಲಿ ನೀವು ಉದ್ಯೋಗ ಬದಲಾಯಿಸಿದರೇ ಪಿಎಫ್ ಬಗ್ಗೆ ಯೋಚಿಸುವಂತಿಲ್ಲ, ಏಕೆಂದರೇ ಇನ್ನು ಮುಂದೆ ನಿಮ್ಮ ನೌಕರಿಯ ಜೊತೆಗೆ, ನಿಮ್ಮ ಪಿಎಫ್ ಖಾತೆ ಕೂಡ ಸ್ವಯಂ ವರ್ಗಾವಣೆಯಾಗಲಿದೆ. 
ಸೆಪ್ಟೆಂಬರ್ ತಿಂಗಳಿನಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ನೀವು ಕೆಲಸ ಬದಲಿಸಿದ ಸಂಸ್ಥೆಗೆ ನಿಮ್ಮ ಹಿಂದಿನ ಕಂಪನಿಯ ಪಿಎಫ್ ಹಣ ವರ್ಗಾವಣೆಯಾಗುತ್ತದೆ. 
ಪಿಎಫ್‌ ಸೇರ್ಪಡೆಗೆ ಆಧಾರ್‌ ಕಡ್ಡಾಯ ಗೊಳಿಸಲಾಗಿದೆ. ಹೀಗಾಗಿ ಕಾರ್ಮಿಕರು ಅದೇ ಖಾತೆಯನ್ನು ಉಳಿಸಿಕೊಳ್ಳಬಹುದು' ಎಂದು ಭವಿಷ್ಯ ನಿಧಿ ಮುಖ್ಯ ಆಯುಕ್ತ ವಿ.ಪಿ. ಜಾಯ್‌ ಹೇಳಿದ್ದಾರೆ.  
ಒಬ್ಬ ವ್ಯಕ್ತಿ ಉದ್ಯೋಗ ಬದಲಿಸಿದಾಗ ಯಾವುದೇ ಅರ್ಜಿಯ ಅಗತ್ಯವಿಲ್ಲದೆ ಕೇವಲ ಮೂರೇ ದಿನಗಳಲ್ಲಿ ಖಾತೆಯ ವರ್ಗಾವಣೆಯಾಗಲಿದೆ. ಆಧಾರ್‌ ಐಡಿ ಮತ್ತು ದೃಢೀಕೃತ ಐಡಿ ಹೊಂದಿದ್ದರೆ ಸಾಕು, ಆತ ದೇಶದ ಯಾವುದೇ ಭಾಗಕ್ಕೆ ಹೋದರೂ ಖಾತೆ ವರ್ಗಾವಣೆಯಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com