ಇನ್ಫೋಸಿಸ್ ಗೆ ಮರಳಿದ ನಂದನ್ ನಿಲೇಕಣಿ: ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆ

ಸಾಲು, ಸಾಲು ರಜೆಗಳ ನಂತರ ವಾರದ ಆರಂಭದ ದಿನವಾದ ಇಂದು ಮುಂಬೈ ಷೇರು ಮಾರುಕಟ್ಟೆಯ...
ನಂದನ್ ನಿಲೇಕಣಿ
ನಂದನ್ ನಿಲೇಕಣಿ
ಬೆಂಗಳೂರು: ಸಾಲು, ಸಾಲು ರಜೆಗಳ ನಂತರ ವಾರದ ಆರಂಭದ ದಿನವಾದ ಇಂದು ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದಿದೆ.
ಕಳೆದ ವಾರ ತೀವ್ರ ಕುಸಿತ ಕಂಡುಬಂದಿದ್ದ ಇನ್ಫೋಸಿಸ್ ನ ಷೇರು ಮಾರಾಟ ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಶೇಕಡಾ 4.5ರಷ್ಟು ಏರಿಕೆಯಾಗಿದೆ. ಹೂಡಿಕೆದಾರರ ಒಟ್ಟು ಸಂಪತ್ತು 9,000 ಕೋಟಿ ರೂಪಾಯಿಗಳನ್ನು ಏರಿಕೆ ಕಂಡುಬಂತು. ಇದಕ್ಕೆ ಇನ್ಫೋಸಿಸ್ ನ ಸಹ ಸ್ಥಾಪಕ ನಂದನ್ ನಿಲೇಕಣಿ ಮತ್ತೆ ಕಂಪೆನಿಗೆ ಮರಳುತ್ತಿರುವುದು ಕಾರಣವೆಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ. 
ಇನ್ಫೋಸಿಸ್ ಕಂಪೆನಿಗೆ ನಂದನ್ ನಿಲೇಕಣಿಯವರ ಮರಳುವಿಕೆಯಿಂದ ಷೇರು ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಆಶಾಕಿರಣ ಮೂಡಿಸಿದೆ. 
ಹತ್ತು ದಿನಗಳ ಹಿಂದೆ ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವಿಶಾಲ್ ಸಿಕ್ಕಾ ಹಠಾತ್ ರಾಜಿನಾಮೆ ನೀಡಿದ್ದರಿಂದ ಕಂಪೆನಿಯ ಷೇರುಗಳು ದಿಢೀರ್ ಕುಸಿತ ಕಂಡುಬಂದಿತ್ತು. ಶೇಕಡಾ 15ರಷ್ಟು ಕುಸಿತ ಕಂಡು ಸುಮಾರು 30,000 ಕೋಟಿ ರೂಪಾಯಿ ನಷ್ಟವುಂಟಾಗಿತ್ತು.
ಇನ್ಫೋಸಿಸ್ ನ ಅಧ್ಯಕ್ಷರಾಗಿ ನಂದನ್ ನಿಲೇಕಣಿ ದಶಕದ ನಂತರ ಬರುತ್ತಾರೆ ಎಂದು ಕಳೆದ ವಾರ ಕಂಪೆನಿ ಘೋಷಣೆ ಮಾಡಿದಾಗ ಷೇರು ಮಾರಾಟದಲ್ಲಿ ಸ್ಥಿರತೆ ಕಂಡುಬಂತು. 
ಹೂಡಿಕೆದಾರರು ಮತ್ತು ಮಾರುಕಟ್ಟೆ ವಿಶ್ಲೇಷಕರ ಜೊತೆ ನಡೆಸಿದ ಸಭೆಯಲ್ಲಿ ನಂದನ್ ನಿಲೇಕಣಿಯವರು ಈಗಾಗಲೇ ಕಂಪೆನಿಯ ಪ್ರಾಮುಖ್ಯತೆಯ ವಿಷಯಗಳನ್ನು ತಿಳಿಸಿದ್ದಾರೆ. ಕಂಪೆನಿಗೆ ಸ್ಥಿರತೆ ತಂದುಕೊಡುವುದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನೇಮಕ, ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸುವುದು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com