ಮೂರು ವರ್ಷ ಹಿಂದಕ್ಕೆ ಜಿಗಿದ ಜಿಡಿಪಿ, ಶೇ.5.7ಕ್ಕೆ ಕುಸಿಯಲು ನೋಟ್ ನಿಷೇಧ ಪ್ರಮುಖ ಕಾರಣ

ಕೇಂದ್ರ ಸರ್ಕಾರ ಗುರುವಾರ ಜಿಡಿಪಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ದೇಶದ ಆರ್ಥಿಕ ಅಭಿವೃದ್ಧಿ ಶೇ.6.1ರಿಂದ ಶೇ.5.1ಕ್ಕೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಜಿಡಿಪಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ದೇಶದ ಆರ್ಥಿಕ ಅಭಿವೃದ್ಧಿ ಶೇ.6.1ರಿಂದ ಶೇ.5.1ಕ್ಕೆ ಕುಸಿದಿದ್ದು, ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟಿದ್ದ ಜಿಡಿಪಿ ದರ ಬೆಳವಣಿಗೆ ಈ ತ್ರೈಮಾಸಿ(ಏಪ್ರಿಲ್ - ಜೂನ್)ದಲ್ಲಿ ಶೇ. 0.4ರಷ್ಟು ಕುಸಿತ ಕಂಡಿದೆ. ಜಿಡಿಪಿ ದರ ಭಾರಿ ಪ್ರಮಾಣದಲ್ಲಿ ಕುಸಿಯಲು ನೋಟ್ ನಿಷೇಧ ಹಾಗೂ ಉತ್ಪಾದನಾ ಚಟುವಟಿಕೆಯಲ್ಲಿನ ಕುಂಟಿತ ಪ್ರಮುಖ ಕಾರಣ ಎನ್ನಲಾಗಿದೆ.
ಕಳೆದ ವರ್ಷ ಏಪ್ರಿಲ್‌– ಜೂನ್‌ ತ್ರೈಮಾಸಿಕದ ಜಿಡಿಪಿ ದರ ಬೆಳವಣಿಗೆ ಶೇ 7.9ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜಿಡಿಪಿ ದರ ಬೆಳವಣಿಗೆ ಶೇ 2.2ರಷ್ಟು ಕುಸಿತವಾಗಿದೆ.
ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯ ಪರಿಣಾಮ ಜಿಡಿಪಿ ದರ ಬೆಳವಣಿಗೆ ಕುಸಿಯಲು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com