ಐಫೋನ್ ಗಳ ಮಾರಾಟದಲ್ಲಿ ಕುಸಿತ: ಟಿಮ್ ಕುಕ್ ವೇತನ ಕಡಿತ!

ಐಫೋನ್ ಗಳ ಮಾರಾಟದಲ್ಲಿ ಕುಸಿತ ದಾಖಲಾಗಿರುವ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್, ಆ್ಯಪಲ್ ಸಂಸ್ಥೆಯ ಟಾಪ್ ಉನ್ನತ ಕಾರ್ಯನಿರ್ವಾಹಕರ ವೇತನವನ್ನು ಕಡಿತಗೊಳಿಸಲಾಗಿದೆ.
ಟಿಮ್ ಕುಕ್
ಟಿಮ್ ಕುಕ್
ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್ ಗಳ ಮಾರಾಟದಲ್ಲಿ ಕುಸಿತ ದಾಖಲಾಗಿರುವ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್, ಆ್ಯಪಲ್ ಸಂಸ್ಥೆಯ ಟಾಪ್ ಉನ್ನತ ಕಾರ್ಯನಿರ್ವಾಹಕರ ವೇತನವನ್ನು ಕಡಿತಗೊಳಿಸಲಾಗಿದೆ. 
ಕಳೆದ 15 ವರ್ಷಗಳಲ್ಲಿ ಆ್ಯಪಲ್ ಮೊಬೈಲ್ ಮಾರಾಟಗಳಲ್ಲಿ ಕುಸಿತ ದಾಖಲಾಗಿದ್ದು, ಶೇ.15 ರಷ್ಟು ವೇತನವನ್ನು ಕಡಿತಗೊಳಿಸಲಾಗಿದೆ. ಆ್ಯಪಲ್ ಸಂಸ್ಥೆಯ ಆದಾಯ ಹಾಗೂ ನಿರ್ವಹಣಾ ಲಾಭ‌ ಕಡಿಮೆಯಾಗಿರುವುದು ವೇತನ ಕಡಿತಕ್ಕೆ ಪ್ರಮುಖ ಕಾರಣವಾಗಿದೆ. 
ಸಂಸ್ಥೆಯ ಆದಾಯ ಶೇ.8 ರಷ್ಟು (216 ಬಿಲಿಯನ್ ಡಾಲರ್ ಗೆ) ಇಳಿಕೆಯಾಗಿದ್ದು, ನಿರ್ವಹಣಾ ಲಾಭ‌ ಶೇ.16 ರಷ್ಟು (60 ಬಿಲಿಯನ್ ಡಾಲರ್) ಗೆ ಇಳಿಕೆಯಾಗಿದೆ. 2001 ರ ನಂತರ ಇದೇ ಮೊದಲ ಬಾರಿಗೆ ಆ್ಯಪಲ್ ಸಂಸ್ಥೆಯ ಮೊಬೈಲ್ ಮಾರಾಟ ಕಡಿಮೆಯಾಗಿದೆ. ಆ್ಯಪಲ್ ನ ನಿರ್ದೇಶಕ ಮಂಡಳಿ ಕಳೆದ ಆರ್ಥಿಕ ವರ್ಷಕ್ಕೆ 224 ಬಿಲಿಯನ್ ಡಾಲರ್ ನಷ್ಟು ಆದಾಯ ಗಳಿಸುವ ಗುರಿ ಹೊಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com