ಚೀನಾದಲ್ಲಿರುವ ಮೆಕ್ ಡೊನಾಲ್ಡ್ ಘಟಕ $2.08 ಬಿಲಿಯನ್ ಗೆ ಮಾರಾಟ

ಅಮೆರಿಕದ ಫಾಸ್ಟ್ ಫುಡ್ ಕಂಪನಿ ಮೆಕ್ ಡೊನಾಲ್ಡ್, ಚೀನಾದಲ್ಲಿರುವ ಘಟಕವನ್ನು $20.08 ಬಿಲಿಯನ್ ಗೆ ಮಾರಾಟ ಮಾಡಿದೆ.
ಮೆಕ್ ಡೊನಾಲ್ಡ್
ಮೆಕ್ ಡೊನಾಲ್ಡ್
ಬೀಜಿಂಗ್: ಅಮೆರಿಕದ ಫಾಸ್ಟ್ ಫುಡ್ ಕಂಪನಿ ಮೆಕ್ ಡೊನಾಲ್ಡ್, ಚೀನಾದಲ್ಲಿರುವ ಘಟಕವನ್ನು $20.08 ಬಿಲಿಯನ್ ಗೆ ಮಾರಾಟ ಮಾಡಿದೆ. 
ಚೀನಾದ ಮೇನ್​ಲ್ಯಾಂಡ್ ಹಾಗೂ ಹಾಂಗ್ ಕಾಂಗ್ ನಲ್ಲಿರುವ ಮೆಕ್ ಡೊನಾಲ್ಡ್ ಘಟಕವನ್ನು ಚೀನಾದ ಕಂಪನಿ ಸಿಟಿಕ್ ಗ್ರೂಪ್ ಹಾಗೂ ಕಾರ್ಲೈಲ್ ಗ್ರೂಪ್ ಗೆ  $20.08 ಬಿಲಿಯನ್ ಗೆ ಮಾರಾಟ ಮಾಡಲಾಗಿರುವುದನ್ನು ಅಧಿಕೃತಪಡಿಸಿದೆ. 
ಸಿಟಿಕ್ ಗ್ರೂಪ್, ಕಾರ್ಲೈಲ್ ಗ್ರೂಪ್ ಹಾಗೂ ಮೆಕ್ ಡೊನಾಲ್ಡ್ ಈ ಮೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ಸಂಸ್ಥೆ ಪ್ರಾರಂಭವಾಗಲಿದ್ದು, ಚೀನಾದ ವಹಿವಾಟುಗಳನ್ನು 20 ವರ್ಷಗಳ ವರೆಗೆ ನಡೆಸಲಿವೆ ಎಂದು ಸಿಟಿಕ್ ಗ್ರೂಪ್ ಸಂಸ್ಥೆ ತಿಳಿಸಿದೆ.  ಹೊಸ ಸಂಸ್ಥೆಯಲ್ಲಿ ಸಿಟಿಕ್ ಽ ಸಿಟಿಕ್ ಗ್ರೂಪ್ ಶೇ.52 ರಷ್ಟು ಷೇರುಗಳನ್ನು ಹೊಂದಿದ್ದರೆ, ಕಾರ್ಲೈಲ್ ಶೇ. 28ರಷ್ಟು ಷೇರುಗಳನ್ನು ಹಾಗೂ ಮೆಕ್ ಡೊನಾಲ್ಡ್ ಸಂಸ್ಥೆ ಶೇ.20 ರಷ್ಟು ಷೇರುಗಳನ್ನು ಹೊಂದಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com