ಸೆನ್ಸೆಕ್ಸ್ 72 ಅಂಕಗಳ ಏರಿಕೆ, 2 ತಿಂಗಳ ಗರಿಷ್ಟ ಮಟ್ಟಕ್ಕೇರಿದ ಭಾರತೀಯ ಷೇರುಮಾರುಕಟ್ಟೆ

ನೋಟು ನಿಷೇಧದ ಬಳಿಕ ಕುಸಿತಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಚೇತರಿಕೆ ಕಂಡಿದ್ದು, 72 ಅಂಕಗಳ ಏರಿಕೆ ಕಾಣುವ ಮೂಲಕ 2 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ನೋಟು ನಿಷೇಧದ ಬಳಿಕ ಕುಸಿತಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಚೇತರಿಕೆ ಕಂಡಿದ್ದು, 72 ಅಂಕಗಳ ಏರಿಕೆ ಕಾಣುವ ಮೂಲಕ 2 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಸೆನ್ಸೆಕ್ಸ್ 72 ಅಂಕಗಳ ಏರಿಕೆಯೊಂದಿಗೆ 27,213 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ-50 ಕೂಡ 15 ಅಂಕಗಳ ಏರಿಕೆಯೊಂದಿಗೆ 8,396 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಇಂಡಸ್  ಇಂಡ್ ಬ್ಯಾಂಕ್, ಟಿಸಿಎಸ್ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಇಂಡಸ್ ಇಂಡ್ ಬ್ಯಾಂಕ್ ತನ್ನ ಮೂರನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಲಿದೆ, ವರದಿಯಲ್ಲಿ ಗ್ರಾಹಕರಿಗೆ ಆಶಾದಾಯಕ ಅಂಶಗಳಿರುವ ಕುರಿತು ಮುನ್ಸೂಚನೆ  ದೊರೆತಿರುವ ಹಿನ್ನಲೆಯಲ್ಲಿ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಟಿಸಿಎಸ್ ಸಂಸ್ಥೆಯ ಷೇರು ಮೌಲ್ಯದಲ್ಲಿ 0.82ರಷ್ಟು ಏರಿಕೆಯಾಗಿದ್ದು, 2, 342 ರು.ಗಳ ಮೇಲ್ಟಟ್ಟ ದರದಲ್ಲಿ  ಷೇರುಗಳು ಮಾರಾಟವಾಗುತ್ತಿವೆ.

ದುಬಾರಿ ಬೆಲೆಯ ಔಷಧಿಗಳ ವಿರುದ್ಧ ಟ್ರಂಪ್ ಕಿಡಿ, ಕುಸಿದ ಫಾರ್ಮಾ ಕ್ಷೇತ್ರದ ಷೇರುಗಳು
ಇನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೀನಿದರೂ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಸ್ತುತ ಅಮೆರಿಕದ ಔಷಧಿ ಕಂಪನಿಗಳ ವಿರುದ್ಧ ಟ್ರಂಪ್ ತಮ್ಮ  ಅಸಮಾಧಾನಗೊಂಡಿದ್ದಾರೆ. ದುಬಾರಿ ಬೆಲೆಯ ಔಷಧಿಗಳ ಕುರಿತು ಟ್ರಂಪ್ ಕಿಡಿಕಾರಿದ್ದು, ದುಬಾರಿ ಬೆಲೆ ಪಡೆಯುತ್ತಿರುವ ಔಷಧ ಸಂಸ್ಥೆಗಳು ದುಬಾರಿ ಸೀಮಾ ಸುಂಕ ನೀಡಬೇಕಾಗುತ್ತದೆ ಎಂದು ಈ ಹಿಂದೆ ಟ್ರಂಪ್ ಎಚ್ಚರಿಸಿದ್ದರು.  ಈ ಹೇಳಿಕೆ ಬೆನ್ನಲ್ಲೇ ವಿವಿಧ ಔಷಧ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದ್ದು, ಡಾ.ರೆಡ್ಡಿ ಲ್ಯಾಬೋರೇಟರಿ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.2.4 ರಷ್ಟು, ಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.2 ರಷ್ಚು, ಲುಪಿನ್  ಲಿಮಿಟೆಡ್ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.1.4 ರಷ್ಚು, ಸಿಪ್ಲಾ ಲಿಮಿಟೆಡ್ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.1.1 ರಷ್ಟು, ನಾಟ್ಕೋ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.2.8 ರಷ್ಚು, ಮತ್ತು ಜುಬಿಲಿಯಂಟ್ ಲೈಫ್ ಸೈನ್ಸ್ ಸಂಸ್ಥೆಯ  ಷೇರು ಮೌಲ್ಯದಲ್ಲಿ ಶೇ.2.7 ರಷ್ಚು ಮೌಲ್ಯ ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಇದೇ ಡೊನಾಲ್ಡ್ ಟ್ರಂಪ್ ಟೊಯೋಟಾ ಸಂಸ್ಥೆಯ ವಿರುದ್ಧವೂ ಕಿಡಿ ಕಾರಿದ್ದರು. ಅಮೆರಿಕದಲ್ಲಿ ಘಟಕ ಸ್ಥಾಪಿಸದಿದ್ದರೆ ದುಬಾರಿ ಸೀಮಾ ಸುಂಕ ವಿಧಿಸುವುದಾಗಿ ಪರೋಕ್ಷ ಬೆದರಿಕೆ ಹಾಕಿದ್ದರು. ಈ ಹೇಳಿಕೆ ಬೆನ್ನಲ್ಲೇ  ಟೊಯೊಟಾ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿ ಸಂಸ್ಥೆಗೆ ಸುಮಾರು 9 ಸಾವಿರ ಕೋಟಿ ನಷ್ಟವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com