ನೋಟು ಅಮಾನ್ಯ: ಐಎಂಎಫ್ ನ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇ.7.6 ರಿಂದ 6.6 ಕ್ಕೆ ಇಳಿಕೆ

ನಿರೀಕ್ಷೆಯಂತೆ ನೋಟು ನಿಷೇಧದ ಪರಿಣಾಮ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 7.6 ರಿಂದ ಶೇ.6.6 ಕ್ಕೆ ಇಳಿಕೆ ಮಾಡಿದೆ.
ನೋಟು ಅಮಾನ್ಯ: ಐಎಂಎಫ್ ನ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇ.7.6 ರಿಂದ 6.6 ಕ್ಕೆ ಇಳಿಕೆ
ನವದೆಹಲಿ: ನಿರೀಕ್ಷೆಯಂತೆ ನೋಟು ನಿಷೇಧದ ಪರಿಣಾಮ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 7.6 ರಿಂದ ಶೇ.6.6 ಕ್ಕೆ ಇಳಿಕೆ ಮಾಡಿದೆ. 
2016-17 ನೇ ಸಾಲಿನ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆ ವಿಶ್ವ ಆರ್ಥಿಕ ಮುನ್ನೋಟ ಅಥವಾ ಅಂದಾಜು ಮಂಡಿಸಿರುವ ಐಎಂಎಫ್, ನೋಟು ನಿಷೇಧದ ಪರಿಣಾಮದಿಂದ ತಾತ್ಕಾಲಿಕ ನಗದು ಬಿಕ್ಕಟ್ಟು ಉಂಟಾಗಿದ್ದು, ಬೆಳವಣಿಗೆ ದರವನ್ನು ಶೇ.04 ರಷ್ಟು ಕಡಿತಗೊಳಿಸಲಾಗಿದೆ ಎಂದು ಐಎಂಎಫ್ ಹೇಳಿದೆ. 
ಈ ಹಿಂದೆ ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.7.6 ರಷ್ಟಿರಲಿದೆ ಎಂದು ಅಂದಾಜು ಮಂಡಿಸಿತ್ತು, ನಂತರದ ಅಂದಾಜಿನಲ್ಲಿ ಶೇ.7.2 ರಷ್ಟಾಗಲಿದೆ ಎಂಬ ಅಂದಾಜು ಮಂಡನೆಯಾಗಿತ್ತು. ಇತ್ತೀಚಿನ ಮುನ್ನೋಟದಲ್ಲಿ ಆರ್ಥಿಕ 
ಬೆಳವಣಿಗೆ ದರದ ಅಂದಾಜು ಶೇ 6.6 ರಷ್ಟಿರಲಿದೆ ಎಂದು ಹೇಳಿದೆ. 
ಈ ಹಿಂದೆಯೇ ಹೇಳಿದಂತೆ ಐಎಂಎಫ್ ನೋಟು ನಿಷೇಧದಿಂದ ಉಂಟಾಗಿರುವ ಪರಿಣಾಮವನ್ನು ತಾತ್ಕಾಲಿಕ ಎಂದಿದ್ದು, 2018 ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆ ದರ ಮತ್ತೆ ಪುಟಿದೇಳಲಿದ್ದು ಶೇ.7.7 ರಷ್ಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದೇ ವೇಳೆ ಚೀನಾದ ಆರ್ಥಿಕ ಬೆಳವಣಿಗೆ ದರದ ಮುನ್ನೋಟ ಸಹ ಲಭ್ಯವಾಗಿದ್ದು ಶೇ.6.5 ರಷ್ಟಿರಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com