ಹೆಚ್-1ಬಿ ವಿಸಾ ನೀತಿ ಮರು ಪರಿಶೀಲನೆ; ಭಾರತೀಯ ಐಟಿ ವಲಯದ ಷೇರುಗಳ ತಲ್ಲಣ!

ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಐಟಿ ವಲಯದ ಷೇರುಗಳು ತಲ್ಲಣಿಸಿದ್ದು, ಬರೊಬ್ಬರಿ ಶೇ.9ರಷ್ಟು ಮೌಲ್ಯ ಕುಸಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಐಟಿ ವಲಯದ ಷೇರುಗಳು ತಲ್ಲಣಿಸಿದ್ದು, ಬರೊಬ್ಬರಿ  ಶೇ.9ರಷ್ಟು ಮೌಲ್ಯ ಕುಸಿದಿದೆ.

ಅಂತೆಯೇ ಭಾರತೀಯ ಷೇರುಮಾರುಕಟ್ಟೆ ಮೇಲೂ ಅಮೆರಿಕದ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 129.20ಅಂಕಗಳ ಕುಸಿತಗೊಂಡಿದೆ. ಆ ಮೂಲಕ 27,716.06 ಅಂಕಗಳಿಗೆ ಸೆನ್ಸೆಕ್ಸ್  ಕುಸಿದಿದ್ದು, ನಿಫ್ಟಿ ಕೂಡ 58.50 ಅಂಕಗಳ ಕುಸಿತದೊಂದಿಗೆ 8,574.25 ಕ್ಕೆ ಇಳಿಕೆಯಾಗಿದೆ. ಪ್ರಮುಖವಾಗಿ ಭಾರತೀಯ ಐಟಿ ವಲಯದ ಪ್ರಮುಖ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ ಹಾಗೂ ಇನ್ಫೋಸಿಸ್ ಸಂಸ್ಥೆಗಳಿಗೆ ಭಾರಿ  ಪ್ರಮಾಣದ ನಷ್ಟವಾಗಿದ್ದು, ಟಿಸಿಎಸ್ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಶೇ.5.46ರಷ್ಟು ಕುಸಿತವಾಗಿದೆ.

ಉಳಿದಂತೆ ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಶೇ.4.57ರಷ್ಟು ಮತ್ತು ವಿಪ್ರೋ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.4.11ರಷ್ಟು ಕುಸಿತಕಂಡಿದೆ. ಉಳಿದಂತೆ ಟೆಕ್ ಮಹೀಂದ್ರ ಸಂಸ್ಥೆಯ ಷೇರುಗಳೂ ಕೂಡ ಭಾರಿ ನಷ್ಟ  ಅನುಭವಿಸಿದ್ದು, ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.9.68 ರಷ್ಟು ಕುಸಿತವಾಗಿದೆ. ಹೆಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ. 6.25ರಷ್ಟು ಕುಸಿತವಾಗಿದೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿ ಹಾಗೂ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ನಿರ್ಧಾರಗಳು ಭಾರತೀಯ ಷೇರುಮಾರುಕಟ್ಟೆಯ ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ  ಬೀರಿದ್ದು, ಹೂಡಿಕೆದಾರರು ಐಟಿ ವಲಯದತ್ತ ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಕುಸಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com