ಸ್ವಿಸ್ ಬ್ಯಾಂಕಿನಲ್ಲಿ ವಿದೇಶಿಯರ ಹಣ: 88ನೇ ಸ್ಥಾನದಲ್ಲಿ ಭಾರತ

ಭಾರತೀಯರು ಸ್ವಿಟ್ಜ್ ಬ್ಯಾಂಕಿನಲ್ಲಿ ಇಡುವ ಕಪ್ಪು ಹಣದ ಪ್ರಮಾಣ ಕಡಿಮೆಯಾಗಿದ್ದು ಇದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಝೂರಿಚ್/ನವದೆಹಲಿ: ಭಾರತೀಯರು ಸ್ವಿಟ್ಜ್ ಬ್ಯಾಂಕಿನಲ್ಲಿ ಇಡುವ ಕಪ್ಪು ಹಣದ ಪ್ರಮಾಣ ಕಡಿಮೆಯಾಗಿದ್ದು ಇದರಿಂದ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವ ದೇಶಗಳ ಪೈಕಿ ಭಾರತ 88ನೇ ಸ್ಥಾನಕ್ಕೆ ಇಳಿದಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.
ಅಲ್ಲದೆ ಸ್ವಿಟ್ಜರ್ಲ್ಯಾಂಡ್ ನ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಅಧಿಕೃತ ಹಣದ ಮೊತ್ತ, ಎಲ್ಲಾ ವಿದೇಶಿಯರು ಇಡುವ ಹಣದಲ್ಲಿ ಶೇಕಡಾ 0.04ರಷ್ಟಿದೆ ಎಂದು ಕಳೆದ ವರ್ಷಾಂತ್ಯಕ್ಕೆ ಸ್ವಿಝ್ ನ್ಯಾಷನಲ್ ಬ್ಯಾಂಕ್ ಸಂಗ್ರಹಿಸಿದ ಅಂಕಿಅಂಶಗಳಿಂದ ತಿಳಿದುಬಂದಿದೆ.
2015ರಲ್ಲಿ ಸ್ವಿಟ್ಜ್ ಬ್ಯಾಂಕಿನಲ್ಲಿ ಹಣ ಇಟ್ಟ ವಿದೇಶಗಳ ಪೈಕಿ ಭಾರತಕ್ಕೆ 75ನೇ ಸ್ಥಾನ ಲಭಿಸಿತ್ತು. ಅದಕ್ಕಿಂತ ಹಿಂದಿನ ವರ್ಷ 61ನೇ ಸ್ಥಾನದಲ್ಲಿತ್ತು. 2007ರವರೆಗೆ ಭಾರತದ ಸ್ಥಾನ 50 ದೇಶಗಳೊಳಗೆ ಇದ್ದಿತು. 2004ರಲ್ಲಿ ಭಾರತ 37ನೇ ಸ್ಥಾನ ಹೊಂದಿತ್ತು.
ಸ್ವಿಟ್ಜರ್ಲ್ಯಾಂಡ್ ನ  ಬ್ಯಾಂಕಿಂಗ್ ಗೌಪ್ಯತೆ ಅಭ್ಯಾಸಗಳಲ್ಲಿ ಜಾಗತಿಕ ಕ್ಲ್ಯಾಂಪ್ಡೌನ್ ಪ್ರಾರಂಭವಾದ ನಂತರ ಭಾರತೀಯರು ಸ್ವಿಟ್ಜರ್ಲ್ಯಾಂಡ್ ನಲ್ಲಿ ಇಡುತ್ತಿದ್ದ ಕಪ್ಪು ಹಣವನ್ನು ಬೇರೆಡೆಗೆ ವರ್ಗಾಯಿಸಿರಬಹುದು. ಇದರಿಂದಾಗಿ ಆ ದೇಶದಲ್ಲಿ ಭಾರತೀಯರ ಕಪ್ಪು ಹಣದ ಪ್ರಮಾಣ ಕಡಿಮೆಯಾಗಿರಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸಿಂಗಾಪುರ ಮತ್ತು ಹಾಂಕಾಂಗ್ ಗಳಿಗೆ ಹೋಲಿಸಿದರೆ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಕೆಲವೇ ಖಾತೆಗಳನ್ನು ಹೊಂದಿದ್ದಾರೆ ಎಂದು ಸ್ವಿಸ್ ಬ್ಯಾಂಕುಗಳು ಹೇಳುತ್ತಿವೆ. 
ವಿಶ್ವಾದ್ಯಂತದಿಂದ ವಿದೇಶಿ ಗ್ರಾಹಕರು ಸ್ವಿಸ್ ಬ್ಯಾಂಕುಗಳಲ್ಲಿ ಹೊಂದಿರುವ ಒಟ್ಟು ಹಣ 1.41  ಟ್ರಿಲಿಯನ್ ಸ್ವಿಸ್ ಫ್ರಾಂಕ್ಸ್ ನಿಂದ 1.42 ಟ್ರಿಲಿಯನ್ ಸ್ವಿಸ್ ಫ್ರಾಂಕ್ಸ್ ವರೆಗೆ ಕಳೆದ ವರ್ಷ ಏರಿಕೆಯಾಗಿತ್ತು.
ಪ್ರತಿ ದೇಶಗಳಿಗೆ ಹೋಲಿಸಿದರೆ ಇಂಗ್ಲೆಂಡ್ ಸ್ವಿಸ್ ಬ್ಯಾಂಕ್ ನಲ್ಲಿ ಅತಿ ಹೆಚ್ಚು ಖಾತೆಗಳನ್ನು ಅಂದರೆ 359 ಟ್ರಿಲಿಯನ್ ಸ್ವಿಸ್ ಫ್ರಾಂಕ್ಸ್ ವರೆಗೆ ಒಳಗೊಂಡಿದೆ. ನಂತರದ ಸ್ಥಾನದಲ್ಲಿ ಅಮೆರಿಕಾ 177 ಟ್ರಿಲಿಯನ್ ಸ್ವಿಸ್ ಫ್ರಾಂಕ್ ನ್ನು ಒಳಗೊಂಡಿದೆ. ಮೊದಲ ಹತ್ತು ಸ್ಥಾನದಲ್ಲಿ ವೆಸ್ಟ್ ಇಂಡೀಸ್, ಫ್ರಾನ್ಸ್, ಬಹಮಾಸ್, ಜರ್ಮನಿ, ಗುರ್ನಸಿ, ಜರ್ಸಿ, ಹಾಂಗ್ ಕಾಂಗ್ ಮತ್ತು ಲಕ್ಸೆಂಬರ್ಗ್ ದೇಶಗಳಿವೆ. 
ಭಾರತ ಪ್ರಸ್ತುತ 676 ಮಿಲಿಯನ್ ಸ್ವಿಸ್ ಫ್ರಾಂಕ್ಸ್ ಹಣವನ್ನು ಇಡುವ ಮೂಲಕ 88ನೇ ಸ್ಥಾನ ಪಡೆದಿದೆ. ಪಾಕಿಸ್ತಾನ 1.4 ಶತಕೋಟಿ ಸ್ವಿಸ್ ಫ್ರಾಂಕ್ ಹೊಂದುವ ಮೂಲಕ 71ನೇ ಸ್ಥಾನದಲ್ಲಿದೆ. 
ಬ್ರಿಕ್ಸ್ ದೇಶಗಳಾದ ರಷ್ಯಾ(19ನೇ ಸ್ಥಾನ), ಚೀನಾ(25ನೇ ಸ್ಥಾನ), ಬ್ರೆಝಿಲ್(52ನೇ ಸ್ಥಾನ) ಮತ್ತು ದಕ್ಷಿಣ ಆಫ್ರಿಕಾ(61ನೇ ಸ್ಥಾನ) ಗಳಿಗಿಂತ ಕೊನೆಯ ಸ್ಥಾನದಲ್ಲಿ ಭಾರತವಿದೆ.  
1996ರಿಂದ 2007ರವರೆಗೆ ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟ ಭಾರತದ ಸ್ಥಾನ 50 ದೇಶಗಳೊಳಗೆ ಇರುತ್ತಿತ್ತು. ಆದರೆ 2008ರ ನಂತರ ಇಳಿಮುಖವಾಗಲು ಆರಂಭವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com