ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!

ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್‌ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್‌ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್  ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

ಅಂತೆಯೇ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರವಿದ್ದು, ಅನಧಿಕೃತವಾಗಿ ಸಂಸ್ಥೆಯ ಮಾಹಿತಿಯನ್ನು ಸಂಗ್ರಹಿಸಿದ್ದು ಮಾತ್ರವಲ್ಲದೇ ಅದನ್ನು ಸೋರಿಕೆ ಮಾಡಿದ್ದಾರೆ ಎಂದು ಸಂಸ್ಥೆ ತನ್ನ ದೂರಿನಲ್ಲಿ  ಆರೋಪಿಸಿದೆ. ಅಂತೆಯೇ ಈಗಾಗಲೇ ಕೆಲ ವೆಬ್ ಸೈಟ್ ಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳು ಅನಧಿಕೃತವಾಗಿದ್ದು, ಇದರಿಂದ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಅಂತೆಯೇ ಮ್ಯಾಜಿಕ್ ಎಪಿಕೆ  ಸೇರಿದಂತೆ ಹಲವು ವೆಬ್ ಸೈಟಿನಲ್ಲಿ ತಚೋರಿಸಲಾಗುತ್ತಿರುವ ಮಾಹಿತಿಯೂ ಅನಧಿಕೃತ ಎಂದು ಸಂಸ್ಥೆ ಹೇಳಿಕೊಂಡಿದೆ.

ಅಲ್ಲದೆ ಜಿಯೋ ಗ್ರಾಹಕ ಮಾಹಿತಿ ಸುಭದ್ರವಾಗಿದ್ದು, ದತ್ತಾಂಶಕ್ಕೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ ಎಂದು ಗ್ರಾಹಕರಿಗೆ ಸ್ಪಷ್ಟನೆ ನೀಡಿದೆ.

ರಿಲಯನ್ಸ್ ಜಿಯೋ ಸಂಸ್ಥೆ ಬರೊಬ್ಬರಿ 11.2 ಕೋಟಿ ಗ್ರಾಹಕರ ಆಧಾರ್‌ ಸಂಖ್ಯೆ ಸೇರಿದಂತೆ  ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಫೋನ್‌ ಆರೇನಾ ವೆಬ್‌ಸೈಟ್‌ ಸೋಮವಾರ ವರದಿ ಪ್ರಕಟಿಸಿತ್ತು. ಜಿಯೋ ಸಿಮ್‌  ಖರೀದಿ ಮಾಡುವಾಗ ಗ್ರಾಹಕರು ಕಂಪೆನಿಗೆ ನೀಡಿರುವ ವೈಯಕ್ತಿಕ ಮಾಹಿತಿ ಅಂದರೆ, ಆಧಾರ್‌ ಸಂಖ್ಯೆ, ಮನೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್‌ ವಿಳಾಸಗಳು ಸೋರಿಯಾಗಿವೆ ಎಂದು ಫೋನ್‌ ಆರೇನಾ ವರದಿ  ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com