ಕಟ್ಟಡ ಮಾರಾಟದ ಮೇಲಿನ ತೆರಿಗೆ ಹಣ ಉಳಿಸುವುದು ಹೇಗೆ?

ಆಸ್ತಿಗಳ ಮೇಲೆ ಬಂಡವಾಳ ಹೂಡುವ ಸಾಕಷ್ಟು ಮಂದಿ ಲಾಭಾಂಶದ ಉದ್ದೇಶದಿಂದಲೇ ಆಸ್ತಿ ಖರೀದಿ ಮಾಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆಸ್ತಿ ಮಾರಾಟ ಪ್ರಕ್ರಿಯೆಲ್ಲಿ ಮಾರಾಟದ ಬಳಿಕ ದೊರೆಯುವ ಲಾಭಾಂಶ ಕನಿಷ್ಠವಾಗಿರುತ್ತದೆ. ಇದಕ್ಕೆ ಕಾರಣ ತೆರಿಗೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಸ್ತಿಗಳ ಮೇಲೆ ಬಂಡವಾಳ ಹೂಡುವ ಸಾಕಷ್ಟು ಮಂದಿ ಲಾಭಾಂಶದ ಉದ್ದೇಶದಿಂದಲೇ ಆಸ್ತಿ ಖರೀದಿ ಮಾಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆಸ್ತಿ ಮಾರಾಟ ಪ್ರಕ್ರಿಯೆಲ್ಲಿ ಮಾರಾಟದ ಬಳಿಕ ದೊರೆಯುವ ಲಾಭಾಂಶ  ಕನಿಷ್ಠವಾಗಿರುತ್ತದೆ. ಇದಕ್ಕೆ ಕಾರಣ ತೆರಿಗೆ.

ಹೌದು... ಆಸ್ತಿ ಮಾರಾಟದಿಂದ ಬರುವ ಲಾಭಾಂಶವನ್ನು ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ (ಬಂಡವಾಳ ಲಾಭಾಂಶ ತೆರಿಗೆ) ಎಂದು ಕರೆಯಲಾಗುತ್ತದೆ. ಈ ಬಂಡವಾಳ ಲಾಭಾಂಶ ಸಾಮಾನ್ಯವಾಗಿ ತೆರಿಗೆ ಸಹಿತವಾಗಿರುತ್ತದೆ. ಆದರೆ ಈ  ತೆರಿಗೆ ಪ್ರಮಾಣ ಮಾತ್ರ ವಿವಿಧ ಸ್ತರಗಳಲ್ಲಿ ವಿಭಿನ್ನವಾಗಿರುತ್ತದೆ. ಒಂದು ವೇಳೆ ನೀವು ಆಸ್ತಿ ಖರೀದಿಸಿದ 36 ತಿಂಗಳ ಒಳಗಾಗಿ ನೀವು ಅದನ್ನು ಮಾರಾಟ ಮಾಡಿದರೆ ಆಗ ನಿಮ್ಮ ಬಂಡವಾಳ ಲಾಂಭಾಂಶ ಕಡಿಮೆಯಾಗುತ್ತದೆ.  ಇಂತಹ ಮಾರಾಟಕ್ಕೆ ತೆರಿಗೆ ಪ್ರಮಾಣ ಹೆಚ್ಚಿರುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ತೆರಿಗೆ ವಿನಾಯಿತಿ ನೀಡಲು ಸಾಧ್ಯವಾಗುವುದಿಲ್ಲ. ಈ ತೆರಿಗೆಯನ್ನು ಕಡಿಮೆ ಅವಧಿಯ ಬಂಡವಾಳ ಲಾಭಾಂಶ ತೆರಿಗೆ ಎಂದು  ಕರೆಯಲಾಗುತ್ತದೆ. ಒಂದು ವೇಳೆ ನೀವು ಆಸ್ತಿ ಖರೀದಿಸಿದ 36 ತಿಂಗಳ ಬಳಿಕ ಆಸ್ತಿ ಮಾರಾಟ ಮಾಡಿದಾಗ ಇಂತಹ ಮಾರಾಟ ಪ್ರಕ್ರಿಯೆಲ್ಲಿ ತೆರಿಗೆ ಪ್ರಮಾಣ ಕಡಿಮೆಯಾಗಿರುತ್ತದೆ. ಇಂತಹ ತೆರಿಗೆ ವಿಧಾನಕ್ಕೆ ಸುದೀರ್ಘ ಅವಧಿಯ  ಬಂಡವಾಳ ಲಾಭಾಂಶ ತೆರಿಗೆ ಎಂದು ಕರೆಯಲಾಗುತ್ತದೆ. ಸುದೀರ್ಘ ಅವಧಿಯ ಬಂಡವಾಳ ಲಾಭಾಂಶ ತೆರಿಗೆ ಪ್ರಕ್ರಿಯೆಯಲ್ಲಿ ತೆರಿಗೆ ವಿನಾಯಿತಿ ನೀಡಬಹುದಾಗಿರುತ್ತದೆ.

ಇದರಲ್ಲಿ ಶೇ.20ರ ವರೆಗೂ ತೆರಿಗೆ ವಿನಾಯಿತಿ ನೀಡುವ ಸೌಲಭ್ಯವಿದ್ದು, ಇದಕ್ಕೆ ಕೆಲ ಷರತ್ತುಗಳು ಅನ್ವಯವಾಗುತ್ತದೆ ಎಂದು ಆರ್ಥಿಕ ತಜ್ಞ ಸುರೇಶ್ ಕೆಪಿ ತಿಳಿಸಿದ್ದಾರೆ. ತೆರಿಗೆ ಪಾವತಿ ಮಾಡುವ ಮುನ್ನ ಅಥಾವ ತೆರಿಗೆ ಪಾವತಿ ಬಳಿಕ ವ್ಯಕ್ತಿಯ ಮತ್ತೊಂದು ಆಸ್ತಿ ಖರೀದಿಗೆ ತೊಡಕಾಗುವಂತಿದ್ದರೆ ಅತ ತನ್ನ ಬಂಡವಾಳವನ್ನು ಲಾಭಾಂಶ ಗಳಿಕೆ ಯೋಜನೆಯಲ್ಲಿ ತೊಡಗಿಸಬಹುದಾಗಿದೆ. ಹೀಗೆ ಬಂಡವಾಳವನ್ನು ಲಾಭಾಂಶ ಗಳಿಕೆ ಯೋಜನೆಯಲ್ಲಿ ತೊಡಗಿಸಿದ ಹಣದ  ಮೂಲಕ ಮೂರು ವರ್ಷದೊಳಗೆ ವ್ಯಕ್ತಿ ಮನೆ ನಿರ್ಮಾಣ ಅಥವಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಬಹುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮೂರು ವರ್ಷಗಳ ಬಳಿಕ ಯೋಜನೆಗೆ ತೊಡಗಿಸಿದ ಹಣಕ್ಕೂ ತೆರಿಗೆ  ಅನ್ವಯವಾಗುತ್ತದೆ. ಅಂತೆಯೇ ಮೂರು ವರ್ಷಗಳೊಳಗೆ ಲಾಭಾಂಶ ಗಳಿಕೆ ಯೋಜನೆಯಲ್ಲಿ ತೊಡಗಿಸಿದ ಹಣದ ಮೂಲಕ ಮೂರು ವರ್ಷದೊಳಗೆ ವ್ಯಕ್ತಿ ಮನೆ ನಿರ್ಮಾಣ ಅಥವಾ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಅಂತಹ ವ್ಯಕ್ತಿ  ಶೇ.20ರಷ್ಟು ತೆರಿಗೆ ವಿನಾಯಿತಿ ಕೋರಬಹದು  ಎಂದು ಎಟಿಕೆ ಇನ್ಫ್ರಾ ಸ್ಟ್ರಕ್ಚರ್ ಅಧ್ಯಕ್ಷ ಹೇಮಂತ್ ಗೌಡ ಮಾಹಿತಿ ನೀಡಿದ್ದಾರೆ.

ಮತ್ತೋರ್ವ ಆರ್ಥಿಕ ತಜ್ಞ ಭಾಟಿಯಾ ಅವರು ಅಭಿಪ್ರಾಯಪಡುವಂತೆ 2014-15ರ ಸಾಲಿನ ಹೊಸ ಅವಕಾಶಗಳ ಅನ್ವಯ ಭಾರತದೊಳಗೆ ಹೊಸ ಮನೆ ಅಥವಾ ಕಟ್ಟಡ ನಿರ್ಮಿಸುವ ವ್ಯಕ್ತಿ ತೆರಿಗೆ ವಿನಾಯಿತಿ ಕೋರಬಹುದು.  ಆದರೆ ಈ ತೆರಿಗೆ ವಿನಾಯಿತಿ ದೇಶದ ಗಡಿಯಾಚೆ ನಿರ್ಮಾಣವಾಗುವ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಪ್ರತೀ ಕಟ್ಟಡ ಮಾರಾಟ ಅಥವಾ ಕೊಳ್ಳುವವರು ಒಂದಿಷ್ಟು ಸಂಗತಿಗಳನ್ನು  ತಿಳಿದುಕೊಳ್ಳಲೇ ಬೇಕು. ಅವುಗಳೆಂದರೆ ಹೊಸ ಮನೆಯ ನಿರ್ಮಾಣ ವೆಚ್ಚ ಹಳೆಯ ಮನೆ ಮಾರಾಟದ ವೆಚ್ಚಕ್ಕಿಂತ ಕಡಿಮೆಯಾಗಿದ್ದರೆ ಆಗ ತೆರಿಗೆ ವಿನಾಯಿತಿ ನೀಡಲು ಸಾಧ್ಯವಾಗುತ್ತದೆ. ಉಳಿದ ಹಣವನ್ನು ಸೆಕ್ಷನ್ 54 ಇಸಿ  ಅಡಿಯಲ್ಲಿ 6 ತಿಂಗಳೊಳಗೆ ಲಾಭಾಂಶ ಗಳಿಕೆ ಯೋಜನೆಯಲ್ಲಿ ಬಂಡವಾಳವನ್ನಾಗಿ ತೊಡಗಿಸಿಕೊಳ್ಳಬಹುದು. ಆದರೆ ಇದು ಮನೆ ಮಾರಾಟ ಮಾಡಿದ ವ್ಯಕ್ತಿಯ ಹೆಸರಿನಲ್ಲೇ ಬಾಂಡ್ ಖರೀದಿಸಬೇಕು. ಅಂತೆಯೇ ತೆರಿಗೆ  ಪಾವತಿದಾರನಿಗೆ ಬಿಲ್ಡರ್ ಕಟ್ಟಡವನ್ನು ನಿಗದಿತ ಅವಧಿಯೊಳಗೆ ಅಂದರೆ ಖರೀದಿ ಮಾಡಿದ ದಿನದಿಂದ ಮೂರು ವರ್ಷದ ಅವಧಿಯೊಳಗೆ ಹಸ್ತಾಂತರಿಸುವಲ್ಲಿ ವಿಫಲನಾದರೆ, ಇಂತಹ ಸಂದರ್ಭಗಳಲ್ಲೂ ಕೂಡ ತೆರಿಗೆ ವಿನಾಯಿತಿ  ಅನ್ವಯವಾಗುತ್ತದೆ ಎಂದು ಹೇಮಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com