ನಗದು ವಹಿವಾಟು ಮಿತಿ 2 ಲಕ್ಷಕ್ಕೆ ಇಳಿಕೆ: ಕೇಂದ್ರದಿಂದ ಹೊಸ ಪ್ರಸ್ತಾವನೆ

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ನಗದು ವಹಿವಾಟು ಮಿತಿಯನ್ನು ಮೂರು ಲಕ್ಷದಿಂದ ಎರಡು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ನಗದು ವಹಿವಾಟು ಮಿತಿಯನ್ನು ಮೂರು ಲಕ್ಷದಿಂದ ಎರಡು ಲಕ್ಷ ರುಪಾಯಿಗೆ ಇಳಿಸಲು ಮಂಗಳವಾರ ಹೊಸ ಪ್ರಸ್ತಾವನೆ ಸಲ್ಲಿಸಿದೆ.
ಕಳೆದ ಫೆಬ್ರವರಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, 3 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು  ವಹಿವಾಟಿನ ಮೇಲೆ ನಿಷೇಧ ವಿಧಿಸಿದ್ದರು. ಇದೀಗ ಅದನ್ನು ಎರಡು ಲಕ್ಷಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ಎರಡು ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರು ಅಷ್ಟೇ ಪ್ರಮಾಣದ ದಂಡ ವಿಧಿಸಲು ಕಾನೂನಿಲ್ಲಿ ಅವಕಾಶವಿದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರು ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಹಣಕಾಸು ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಪ್ರತಿಪಕ್ಷ ಟಿಎಂಸಿ, ಬಿಜೆಡಿ, ಆರ್ಎಸ್ ಪಿ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com