ಭಾರತ ಸುಮಾರು 2,19,000 ಲಕ್ಷಾಧಿಪತಿಗಳಿಗೆ ನೆಲೆ: ಕ್ಯಾಪ್ಜೆಮಿನಿ ವರದಿ

ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ದೇಶವು ಅತ್ಯಂತ ಶ್ರೀಮಂತ ವ್ಯಕ್ತಿಗಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ದೇಶವು ಅತ್ಯಂತ ಶ್ರೀಮಂತ ವ್ಯಕ್ತಿಗಳಿಗೆ ನೆಲೆಯಾಗಿದೆ. ಇಲ್ಲಿ ಅತ್ಯಂತ  ಶ್ರೀಮಂತ ವ್ಯಕ್ತಿಗಳು ಅಂದರೆ ಲಕ್ಷಾಧಿಪತಿಗಳು ಸುಮಾರು 2,19,00 ಮಂದಿಯಿದ್ದು ಒಟ್ಟಾರೆ 877 ಶತಕೋಟಿ ಡಾಲರ್ ನಷ್ಟು ಸಂಪತ್ತು ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ.
2017ರ ಏಷಿಯಾ ಫೆಸಿಫಿಕ್ ಸಂಪತ್ತು ವರದಿ(ಎಪಿಡಬ್ಲ್ಯುಆರ್)ಯನ್ನು ಕ್ಯಾಪ್ಜೆಮಿನಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ ನಾಲ್ಕನೇ ಸ್ಥಾನ ಹೊಂದಿದ್ದು ಮಾರುಕಟ್ಟೆ ಷೇರಿನಲ್ಲಿ ಭಾರತದ ವ್ಯಕ್ತಿಗಳು ಶೇಕಡಾ 4ರಷ್ಟು ಹೂಡಿಕೆ ಮಾಡುತ್ತಾರೆ.
ಮೂಲ ನಿವಾಸ, ಸಂಗ್ರಹಣೆಗಳು, ಉಪಭೋಗಗಳು ಮತ್ತು ಗ್ರಾಹಕರ ಬಾಳಿಕೆಗಳನ್ನು ಹೊರತುಪಡಿಸಿ ಹೂಡಿಕೆ ಮಾಡಬಹುದಾದ ಸ್ವತ್ತುಗಳು 1 ದಶಲಕ್ಷ ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಾಗಿರುವುದನ್ನು ಉನ್ನತ ನಿವ್ವಳ ವ್ಯಕ್ತಿಗಳು(ಹೆಚ್ ಎನ್ ಡಬ್ಲ್ಯುಐ) ಎಂದು ಕರೆಯಲಾಗುತ್ತದೆ.
2016ರ ಕೊನೆಗೆ ಜಪಾನ್ ನಲ್ಲಿ 28,91,000 ಲಕ್ಷಾಧಿಪತಿಗಳಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿ 11,29,000 ಲಕ್ಷಾಧಿಪತಿಗಳು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿ 2,55,000 ಮಂದಿ ಲಕ್ಷಾಧಿಪತಿಗಳನ್ನು ಹೊಂದಿತ್ತು.
2015-16ರ ಮಧ್ಯದಲ್ಲಿ ಭಾರತದಲ್ಲಿ ಲಕ್ಷಾಧಿಪತಿಗಳ ಜನಸಂಖ್ಯೆ ಶೇಕಡಾ 9.5ರಷ್ಟು ಹೆಚ್ಚಿಕೆಯಾಗಿದ್ದು ಏಷ್ಯಾ ಫೆಸಿಫಿಕ್ ಪ್ರಾಂತ್ಯದ ವಾರ್ಷಿಕ ಅಭಿವೃದ್ಧಿ ದರವಾದ ಶೇಕಡಾ 7.4ರ ಸರಾಸರಿಯನ್ನು ಮೀರಿತ್ತು. ಇದು ಚೀನಾ ಮತ್ತು ಜಪಾನ್ ಗಿಂತ ವಾರ್ಷಿಕ ಸರಾಸರಿ ಬೆಳವಣಿಗೆಗಿಂತ ಜಾಸ್ತಿಯಾಗಿದೆ. ಚೀನಾದಲ್ಲಿ ಆ ವರ್ಷ ವಾರ್ಷಿಕ ಸರಾಸರಿ ಬೆಳವಣಿಗೆ ಶೇಕಡಾ 9.1ರಷ್ಟಿದ್ದರೆ ಜಪಾನ್ ನಲ್ಲಿ ಶೇಕಡಾ 6.3ರಷ್ಟಿತ್ತು.
ಭಾರತದಲ್ಲಿ ವೈಯಕ್ತಿಕ ಆದಾಯ ದುಪ್ಪಟ್ಟು ಪ್ರಮಾಣದಲ್ಲಿ 2015-16ರಲ್ಲಿ ಏರಿಕೆ ಕಂಡುಬಂದಿತ್ತು. ಸರಾಸರಿ ಆರ್ಥಿಕ ಬೆಳವಣಿಗೆ ನಂತರ ಮುಂದಿನ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕವಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಲವು ಸವಾಲುಗಳು ಕೂಡ ಎದುರಾಗಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಜಾಗೃತರಾಗಿ ಇಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com