ನ.1 ರಿಂದ ಷೇರು ಮರುಖರೀದಿಗೆ ಚಾಲನೆ ನಿಡಲಿರುವ ಇನ್ಫೋಸಿಸ್

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ಇನ್ಫೋಸಿಸ್ ನ.1 2017 ರಿಂದ 13,000 ಕೋಟಿ ರೂ.ಷೇರು ಮರು ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದೆ.
ಇನ್ಫೋಸಿಸ್
ಇನ್ಫೋಸಿಸ್
ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ಇನ್ಫೋಸಿಸ್ ನ.1 2017 ರಿಂದ 13,000 ಕೋಟಿ ರೂ.ಷೇರು ಮರು ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದೆ.
"ಸಂಸ್ಥೆಯ ಷೇರು ಮರುಖರೀದಿ ಸಮಿತಿ ಈ ತೀರ್ಮಾನ ಕೈಗೊಂಡಿದ್ದು ಸಂಸ್ಥೆಯ ಇಕ್ವಿಟಿ ಷೇರುದಾರರ ಅವರ ಹೆಸರನ್ನೊಳಗೊಂಡ ಪತ್ರವನ್ನು ಕಳುಹಿಸಲಾಗುವುದು, ಅವರಿಗೆ ಈ ಮರುಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಇರುತ್ತದೆ."  ಇನ್ಫೋಸಿಸ್ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಈ ಮಾಹಿತಿ ನೀಡಲಾಗಿದೆ.  ಆ. 19 ರಂದು ಷೇರು ಮರುಖರೀದಿಯ ಪ್ರಸ್ತಾವನೆಯನ್ನು ಇನ್ಫೋಸಿಸ್ ಆಡಳಿತ ಮಂದಳಿ ಅಂಗೀಕರಿಸಿತ್ತು.
36 ವರ್ಷ ದ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಷೇರುಗಳ ಮರುಖರೀದಿಯಲ್ಲಿ ತೊಡಗಿದ್ದು  11.30 ಕೋಟಿ ಷೇರುಗಳನ್ನು  1,150 ಕೋಟಿ ರೂ. ಗೆ ಖರೀದಿಸುತ್ತಿದೆ.
ಇದೀಗ ಇನ್ಫೋಸಿಸ್ ತನ್ನ ಷೇರುದಾರರಿಗೆ ಹೆಚ್ಚುವರಿ ಬಂಡವಾಳವನ್ನು ಹಿಂದಿರುಗಿಸಲು ಮುಂದಾಗುತ್ತಿರುವ ಈ ಸಮಯದಲ್ಲಿ , ಸಂಸ್ಥೆಯ ಕಲವು ಸಂಸ್ಥಾಪಕರು ಮತ್ತು ಉನ್ನತ-ಆಡಳಿತ ವರ್ಗ, ಮಾಜಿ ಕಾರ್ಯನಿವಹಣಾ ಅಧಿಕಾರಿಗಳಿಂದ ಷೇರು ಮರುಖರೀದಿಯ ಬೇಡಿಕೆ ಬಹಳ ಹಿಂದೆಯೇ ಬಂಡಿದ್ದಿತು ಎನ್ನುವುದನ್ನು ನಾವು ಗಮನಿಸಬಹುದು.
ಷೇರು ಮರುಖರೀದಿಗಳು ಸಾಮಾನ್ಯವಾಗಿ ಪ್ರತಿ ಷೇರುಗಳ ಗಳಿಕೆಗಳನ್ನು ಸುಧಾರಿಸುತ್ತವೆ ಮತ್ತು ಷೇರುದಾರರಿಗೆ ಹೆಚ್ಚುವರಿ ಹಣವನ್ನು ಹಿಂದಿರುಗುವಂತೆ ಮಾಡಿ ಲಾಭ ವನ್ನು ತಂದು ಕೊಡುತ್ತದೆ. ಈ ವರ್ಷಾರಂಭದಲ್ಲಿ  ಇನ್ಫೋಸಿಸ್ ನ ಪ್ರತಿಸ್ಪರ್ಧಿ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 16,000 ಕೋಟಿ ರೂ.ಷೇರು ಮರುಖರೀದಿ ಆಫರ್ ನೀಡಿತ್ತು. ಇನ್ನು ಕಾಗ್ನಿಜಂಟ್, ವಿಪ್ರೋ ಮತ್ತು ಮೈಂಡ್ ಟ್ರೀ ಮುಂತಾದ ಇತರ ಸಂಸ್ಥೆಗಳೂ ಸಹ ಷೇರು ಮರುಖರೀದಿ ಪ್ರಕಟಣೆ ಹೊರಡಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com