ಏಪ್ರಿಲ್-ಸೆಪ್ಟೆಂಬರ್ ನೇರ ತೆರಿಗೆ ಸಂಗ್ರಹ ಶೇ.16 ರಷ್ಟು ಏರಿಕೆ

ಏಪ್ರಿಲ್-ಸೆಪ್ಟೆಂಬರ್ ತಿಂಗಳ ನೇರ ತೆರಿಗೆ ಸಂಗ್ರಹ ಶೇ.16 ರಷ್ಟು ಏರಿಕೆಯಾಗಿದ್ದು 3.86 ಲಕ್ಷ ಕೋಟಿಯಷ್ಟಾಗಿದ್ದು ತೆರಿಗೆ ಸಂಗ್ರಹದಲ್ಲಿ ಆರೋಗ್ಯಕರ ಬೆಳವಣಿಗೆ ದಾಖಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ತೆರಿಗೆ
ತೆರಿಗೆ
ನವದೆಹಲಿ: ಏಪ್ರಿಲ್-ಸೆಪ್ಟೆಂಬರ್ ತಿಂಗಳ ನೇರ ತೆರಿಗೆ ಸಂಗ್ರಹ ಶೇ.16 ರಷ್ಟು ಏರಿಕೆಯಾಗಿದ್ದು 3.86 ಲಕ್ಷ ಕೋಟಿಯಷ್ಟಾಗಿದ್ದು ತೆರಿಗೆ ಸಂಗ್ರಹದಲ್ಲಿ ಆರೋಗ್ಯಕರ ಬೆಳವಣಿಗೆ ದಾಖಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. 
ಒಟ್ಟು ಬಜೆಟ್ ಅಂದಾಜಿನ ಶೇ.39.4 ರಷ್ಟು ನೇರ ತೆರಿಗೆ ಸಂಗ್ರಹ ಇರಲಿದ್ದು, ಅಂದಾಜಿನಲ್ಲಿ ಪ್ರಸಕ್ತ ವರ್ಷ ಒಟ್ಟು 9.8 ಲಕ್ಷ ಕೋಟಿ ನೇರ ತೆರಿಗೆಯ ಗುರಿ ಇದೆ. ಕಳೆದ ವರ್ಷಕ್ಕಿಂತ ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ತಿಂಗಳ ಅವಧಿಯ ನೇರ ತೆರಿಗೆ ಸಂಗ್ರಹ ಶೇ.15.8 ರಷ್ಟು ಹೆಚ್ಚಿದೆ ಎಂದು ಹಣಕಾಸು ಇಲಾಖೆ ಹೇಳಿದೆ. 
ಕಾರ್ಪೊರೇಟ್ ಆದಾಯ ತೆರಿಗೆಯ ಅಡ್ವಾನ್ಸ್ ತೆರಿಗೆ ಶೆ.8.1 ರಷ್ಟು ಏರಿಕೆ ಕಂಡಿದೆ ಹಾಗೂ ವೈಯಕ್ತಿಕ ಆದಾಯ ತೆರಿಗೆಯ ಅಡ್ವಾನ್ಸ್ ತೆರಿಗೆ ಶೇ.30.1 ರಷ್ಟು ಏರಿಕೆಯಾಗಿದೆ. ರೀಫಂಡ್ಸ್ ನ್ನು ಹೊರತುಪಡಿಸಿ ಒಟ್ಟು ನೇರ ತೆರಿಗೆ ಸಂಗ್ರಹ ಶೇ.10.3 ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com