6,100 ಕೋಟಿಯ 41 ಧ್ರುವ ಹೆಲಿಕಾಪ್ಟರ್ ನಿರ್ಮಾಣದ ಗುತ್ತಿಗೆ ಪಡೆದ ಎಚ್ಎಎಲ್

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಭಾರತೀಯ ವಾಯುಪಡೆ ಮತ್ತು ನೌಕಾ ಪಡೆಗಾಗಿ 6,100ಕೋಟಿ...
ಏರ್ ಶೋ ವೇಳೆ ಪ್ರದರ್ಶನ ನೀಡಿದ ಧ್ರುವ ಹೆಲಿಕಾಪ್ಟರ್
ಏರ್ ಶೋ ವೇಳೆ ಪ್ರದರ್ಶನ ನೀಡಿದ ಧ್ರುವ ಹೆಲಿಕಾಪ್ಟರ್
ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಭಾರತೀಯ ಸೇನೆ ಮತ್ತು ನೌಕಾ ಪಡೆಗಾಗಿ 6,100ಕೋಟಿ ರುಪಾಯಿ ಮೊತ್ತದ ಅತ್ಯಾಧುನಿಕ ಲಘು ಹೆಲಿಕಾಪ್ಟರ್(ಎಎಲ್​ಎಚ್ ಧ್ರುವ)ಗಳನ್ನು ನಿರ್ಮಿಸುವ ಮತ್ತೊಂದು ಗುತ್ತಿಗೆಯನ್ನು ಪಡೆದುಕೊಂಡಿದೆ.
ಮುಂದಿನ 60 ತಿಂಗಳಲ್ಲಿ 41 ಧ್ರುವ ಹೆಲಿಕಾಪ್ಟರ್ ಗಳನ್ನು ನಿರ್ಮಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಈ ಹೊಸ ಆದೇಶದಿಂದ ಎಚ್ಎಎಲ್ ಸಾಮರ್ಥ್ಯದ ಮೇಲಿನ ವಿಶ್ವಾಸ ಹೆಚ್ಚಿದೆ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಎಚ್ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ ಸುವರ್ಣ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಳೆದ ಮಾರ್ಚ್ ನಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಹಾಗೂ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ನಡುವೆ ಒಪ್ಪಂದವಾಗಿತ್ತು. ಎಚ್​ಎಎಲ್​ನಿಂದ ನಿರ್ವಿುಸಲಾದ ಒಟ್ಟು 32 ಧ್ರುವ ಹೆಲಿಕಾಪ್ಟರ್​ಗಳಿಗೆ 5 ವರ್ಷ ಕಾರ್ಯಕ್ಷಮತೆ ಆಧಾರದ ಲಾಜಿಸ್ಟಿಕ್ ಸೇವೆಗಳನ್ನು (ಪಿಬಿಎಲ್) ಒದಗಿಸಲಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ಭಾರತೀಯ ನೌಕಾಪಡೆಗೆ ತಲಾ 16 ಹೆಲಿಕಾಪ್ಟರ್​ಗಳಾಗಿ ವಿಭಾಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com