ಕ್ರಿಪ್ಟೊ ಕರೆನ್ಸಿಗಳನ್ನು ತಿರಸ್ಕರಿಸಿರುವ ಭಾರತ ಮತ್ತು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕುಗಳು

ಯಾವುದೇ ಕರೆನ್ಸಿ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಯಾವುದೇ ಕರೆನ್ಸಿ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಿದೆ. ಇದರಿಂದಾಗಿ ಸ್ಥಳೀಯ ವಹಿವಾಟುಗಳಲ್ಲಿ ಬಿಟ್ ಕಾಯಿನ್ ಮತ್ತು ಕ್ರಿಪ್ಟೊ ಕರೆನ್ಸಿಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಇನ್ನೊಂದೆಡೆ ಪಾಕಿಸ್ತಾನ ಕೇಂದ್ರೀಯ ಬ್ಯಾಂಕು ಕೂಡ ಕ್ರಿಪ್ಟೊ ಕರೆನ್ಸಿಗಳ ವಹಿವಾಟು ದೇಶದಲ್ಲಿ ಕಾನೂನುಬದ್ಧವಲ್ಲ ಎಂದು ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಎಲ್ಲಾ ಬ್ಯಾಂಕುಗಳಿಗೆ ಮತ್ತು ಇತರ ಹಣಕಾಸು ಸೇವೆ ಪೂರೈಕೆದಾರರಿಗೆ ಆದೇಶ ನೀಡಿ ಕ್ರಿಪ್ಟೊ ಕರೆನ್ಸಿ ವಹಿವಾಟುಗಳನ್ನು ನಿರಾಕರಿಸುವಂತೆ ಹೇಳಿದೆ. ಪಾಕಿಸ್ತಾನದ ಹೊರಗೆ ಹಣವನ್ನು ವರ್ಗಾಯಿಸಲು ಕ್ರಿಪ್ಟೊ ಕರೆನ್ಸಿಗಳನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಕ್ರಿಪ್ಟೊ ಕರೆನ್ಸಿ ಖರೀದಿಸದಂತೆ ಮತ್ತು ವಹಿವಾಟು ನಡೆಸದಂತೆ ಹೇಳಿತ್ತು. ಡಿಜಿಟಲ್ ಕರೆನ್ಸಿಗಳ ವಹಿವಾಟು ಅಕ್ರಮ ಎಂದು ಹೇಳಿತ್ತು.

ಭಾರತ ಮತ್ತು ಪಾಕಿಸ್ತಾನದ ಈ ಘೋಷಣೆಯಿಂದಾಗಿ ಬಿಟ್ ಕಾಯಿನ್ ಗಳ ಬೆಲೆ ಅಂತಾರಾಷ್ಟ್ರೀಯ ಬೆಲೆಯ ಡಾಲರ್ 6,617 ಕ್ಕಿಂತ 3,50,000ರಷ್ಟು ಇಳಿಕೆಯಾಗಿದೆ ಎಂದು ಕ್ರಿಪ್ಟೊ ಕರೆನ್ಸಿ ವಿತರಣೆ ಕಂಪೆನಿ ಕಾಯಿನೊಮೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com