2018-19ರಲ್ಲಿ ಭಾರತದ ಜಿಡಿಪಿ ದರ ಶೇ.8.2ಕ್ಕೆ ಏರಿಕೆ

2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.8.2ಕ್ಕೆ ಏರಿಕೆಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.8.2ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ ಅಧಿಕೃತ ದತ್ತಾಂಶಗಳಿಂದ ತಿಳಿದು ಬಂದಿದೆ.
2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 8.2ರಷ್ಟು ದಾಖಲಾಗಿದ್ದು, ಇದು ಕಳೆದ ವರ್ಷದ ನಾಲ್ಕನೆ ತ್ರೈಮಾಸಿಕದ ಜೆಡಿಪಿ ದರ ಶೇ.7.7ಕ್ಕಿಂತ ಹೆಚ್ಚು ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ ದೇಶದ ಜಿಡಿಪಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.
ದೇಶದ ಜಿಡಿಪಿ ಬೆಳವಣಿಗೆ ದರ ಕುರಿತಂತೆ ಹಲವು ಆರ್ಥಿಕ ಸಮೀಕ್ಷೆಗಳು ನೀಡಿದ್ದ ಜಿಡಿಪಿ ಬೆಳವಣಿಗೆ ದರದ ಅಂದಾಜು ಮಟ್ಟವನ್ನು ದಾಟಿ ಆರ್ಥಿಕ ಪ್ರಗತಿ ಕಂಡಿದೆ. ಅದರಲ್ಲೂ ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿದೆ.
ಪ್ರಮುಖವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಬರೋಬ್ಬರಿ ಶೇ. 13.5 ರಷ್ಟು ಬೆಳವಣಿಯಾಗಿರುವುದು ಜಿಡಿಪಿ ಹೆಚ್ಚಾಗಲು ಕಾರಣವಾಗಿದೆ. 
ಜಿಡಿಪಿ ದರ 2017-18ರ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ ಶೇ. 7.7ರಷ್ಟು, ಮೊದಲ ತ್ರೈಮಾಸಿಕದಲ್ಲಿ ಶೇ. 5.9ರಷ್ಟು ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com