ಷೇರುಪೇಟೆ ಮೇಲೆ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್; ಸೆನ್ಸೆಕ್ಸ್ 500 ಅಂಕ ಕುಸಿತ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತಕಂಡಿದೆ.
ಇಂದು ವಹಿವಾಟು ಆರಂಭವಾಗುತ್ತಿರುವಂತೆಯೇ ಸೆನ್ಸೆಕ್ಸ್ 500 ಅಂಕಗಳ ಕುಸಿತಗೊಂಡಿದ್ದು, ಆ ಮೂಲಕ 34,458.86 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ನಿಫ್ಟಿ ಕೂಡ 99.35 ಅಂಕಗಳ ಕುಸಿತ ಕಂಡಿದ್ದು, 10,391.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಪ್ರಮುಖವಾಗಿ ಇಂದಿನ ಚುನಾವಣಾ ಫಲಿತಾಂಶ ಷೇರುಮಾರುಕಟ್ಟೆ ಮೇಲೆ ನೆರ ಪರಿಣಾಮ ಬೀರಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಆಡಳಿತಾ ರೂಢ ಬಿಜೆಪಿ ಪಕ್ಷ ಹಿನ್ನಡೆ ಅನುಭಿಸಿದೆ, ಆದರೆ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದ್ದು ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಉಳಿದಂತೆ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂ ನಲ್ಲಿ ಎಂಎನ್ ಎಫ್ ಪಕ್ಷಗಳು ಮುನ್ನಡೆ ಸಾಧಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com