ಡೀಸೆಲ್ ದರ ಇಳಿಕೆ: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದ್ದು, ಭಾನುವಾರ ಡೀಸೆಲ್ ದರದಲ್ಲಿ 13 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದ್ದು, ಭಾನುವಾರ ಡೀಸೆಲ್ ದರದಲ್ಲಿ 13 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಭಾನುವಾರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಸಮಸ್ಥಿತಿ ಕಂಡುಬಂದಿದ್ದರೆ, ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಮೂಲಗಳ ಪ್ರಕಾರ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 13 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಗೆ 70.91 ರೂ.ಗಳಷ್ಟಿದ್ದು, ಇನ್ನು ಡೀಸೆಲ್‌ ಬೆಲೆಯಲ್ಲಿ 13 ಪೈಸೆ ಇಳಿಕೆಯಾಗಿ 64.73 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 70.34 ರೂ.ಗಳಷ್ಟಿದ್ದರೆ, ಡೀಸೆಲ್‌ಗೆ 13 ಪೈಸೆ ಕಡಿಮೆಯಾಗಿ 64.38 ರೂ.ಗಳಿಗೆ ಮಾರಾಟವಾಗುತ್ತಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ 75.96 ರೂ. ಗಳಷ್ಟಿದ್ದು, ಡೀಸೆಲ್‌ ಗೆ 12 ಪೈಸೆ ಕಡಿಮೆಯಾಗಿ 67.38 ರೂ.ಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 72.99 ರೂ.ಗಳಿದ್ದರೆ, ಲೀಟರ್‌ ಡೀಸೆಲ್ ಗೆ 13ಪೈಸೆಯಷ್ಟು ಕಡಿಮೆಯಾಗಿ 67.97 ರೂ.ಗಳಿಗೆ ಮಾರಾಟವಾಗುತ್ತಿದೆ.
ಕೋಲ್ಕತಾದಲ್ಲಿ ಲೀ. ಪೆಟ್ರೋಲ್‌ 72.43 ರೂ.ಗೆ ಗಳಷ್ಟಿದ್ದರೆ, 12 ಪೈಸೆ ಕಡಿಮೆಯಾಗುವ ಮೂಲಕ ಲೀಟರ್‌ ಡೀಸೆಲ್‌ 66.14 ರೂ.ಗಳಿಗೆ ಮಾರಾಟವಾಗುತ್ತಿದೆ. ನೋಯಿಡಾದಲ್ಲಿ ಲೀ. ಪೆಟ್ರೋಲ್‌ಗೆ 7 ಪೈಸೆ ಕಡಿಮೆಯಾಗಿ 70.22 ರೂ.ಗಳಷ್ಟಿದ್ದರೆ, ಡೀಸೆಲ್‌ 17 ಪೈಸೆ ಏರಿಕೆಯಾಗಿ 63.74 ರೂ.ಗಳಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com