ಅಮ್ ಸ್ಟಾರ್ ಡ್ಯಾಮ್ ಬೆಂಗಳೂರು ನಡುವಣ ಪ್ರತಿದಿನ ತಡೆರಹಿತ ವಿಮಾನ

ಬೆಂಗಳೂರನ್ನು ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಜೆಟ್ ಏರ್ ವೇಸ್ ಕಂಪನಿ ಬೆಂಗಳೂರು ಹಾಗೂ ಅಮ್ ಸ್ಟಾರ್ ಡ್ಯಾಮ್ ನಡುವಣ ಪ್ರತಿದಿನ ತಡೆ ರಹಿತ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.
ಜೆಟ್ ಏರ್ ವೇಸ್ ಚಿತ್ರ
ಜೆಟ್ ಏರ್ ವೇಸ್ ಚಿತ್ರ

ಅಮ್ ಸ್ಟಾರ್ ಡ್ಯಾಮ್: ನೇದರ್ ಲ್ಯಾಂಡ್ ಭಾರತೀಯರಿಗೆ ನೀಡುವ ವೀಸಾ ಪ್ರಮಾಣದಲ್ಲಿ ಪ್ರತಿವರ್ಷ ಶೇಕಡಾ 25 ರಷ್ಟುಹೆಚ್ಚಿಸಲು ನಿರ್ಧರಿಸಲಾಗಿದೆ

ಬೆಂಗಳೂರನ್ನು ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಜೆಟ್ ಏರ್ ವೇಸ್ ಕಂಪನಿ ಬೆಂಗಳೂರು ಹಾಗೂ ಅಮ್ ಸ್ಟಾರ್ ಡ್ಯಾಮ್ ನಡುವಣ ಪ್ರತಿದಿನ ತಡೆ ರಹಿತ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.

ಈಗಾಗಲೇ ಮುಂಬೈ ಹಾಗೂ ದೆಹಲಿಯಲ್ಲಿಇಂತಹ ಸೇವೆ ಕಾರ್ಯಾಚರಣೆಯಲ್ಲಿದ್ದು, ಆಕ್ಟೋಬರ್ 29 ರಿಂದ 2017ರಿಂದ ಔಪಚಾರಿಕವಾಗಿ ಆರಂಭಿಸಲಾಗಿದೆ ಎಂದು ಜೆಟ್ ಏರ್ ವೇಸ್ ಕಂಪನಿ
ಮಾಹಿತಿ ತಿಳಿಸಿದೆ.

ಹೊಸ ಸೇವೆಯಿಂದ ಕಾರ್ಪೋರೇಟ್ ಹಾಗೂ ವ್ಯವಹಾರಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದಕ್ಕೂ ಮುಂಚೆ ಮುಂಬೈ, ಅಥವಾ ದೆಹಲಿಗೆ ಹೋಗಿ ನಂತರ ಅಮ್ ಸ್ಟಾರ್ ಡ್ಯಾಮ್  ವಿಮಾನ ಹಿಡಿಯಬೇಕಾಗಿತ್ತು, ಆದರೆ, ಇದೀಗ ಬೆಂಗಳೂರಿನಿಂದಲೇನೇರವಾಗಿ ಅಮ್ ಸ್ಟಾರ್ ಡ್ಯಾಮ್ ತಲುಪಬಹುದಾಗಿದೆ.

ಬೆಳಿಗ್ಗೆ 2-30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನಮಾರನೇ ದಿನ 8-30ಕ್ಕೆ ಅಮ್ ಸ್ಟಾರ್ ಡ್ಯಾಮ್ ತಲುಪಲಿದೆ. ಬ್ಯೂಸಿನೆಸ್ ಕ್ಲಾಸ್ ಟಿಕೆಟ್ ದರ ಒಂದೂವರೆ ಲಕ್ಷ ರೂ ಆಗಲಿದೆ ಎಂದು ಕಂಪನಿಯ ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com