2018ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಪ್ರಮಾಣ ಶೇಕಡಾ 7.6: ಮೂಡೀಸ್
ನವದೆಹಲಿ; ನೋಟುಗಳ ಅನಾಣ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಉಂಟಾದ ತೊಂದರೆಯ ಋಣಾತ್ಮಕ ಪರಿಣಾಮದಿಂದ ಭಾರತದ ಆರ್ಥಿಕ ಸ್ಥಿತಿ ಪುನಶ್ಚೇತನಗೊಳ್ಳುತ್ತಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 7.6ರಷ್ಟಿದೆ, ಅದು ಬದಲಾವಣೆಯಾಗಿಲ್ಲ ಎಂದು ಮೂಡಿಯ ಹೂಡಿಕೆ ಸೇವೆ ಹೇಳಿದೆ.
2018-19ನೇ ಸಾಲಿನ ಜಾಗತಿಕ ಬೆಳವಣಿಗೆ ಅಂದಾಜಿನಂತೆ, ನೋಟುಗಳ ಅನಾಣ್ಯೀಕರಣದಿಂದ ಭಾರತದ ಗ್ರಾಮೀಣ ಆರ್ಥಿಕತೆಗೆ ಹೊಡೆತ ಬಿದ್ದಿತ್ತ. ಗ್ರಾಮೀಣ ಆರ್ಥಿಕತೆಯನ್ನು ಸ್ಥಿರಗೊಳಿಸಲು ಈ ವರ್ಷದ ಬಜೆಟ್ ನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಈ ವರ್ಷ ದೇಶದ ಜಿಡಿಪಿ ಶೇಕಡಾ 7.6ರಷ್ಟಿದ್ದು, ಮುಂದಿನ ವರ್ಷ ಅದು ಶೇಕಡಾ 7.5ರಷ್ಟಾಗಬಹುದು ಎಂದು ವರದಿಯಲ್ಲಿ ಹೇಳಿದೆ.
ಅಮೆರಿಕಾ ಮೂಲದ ಕಂಪೆನಿಯಾದ ಮೂಡಿ, ಕಳೆದ 13 ವರ್ಷಗಳಲ್ಲಿ ಭಾರತದ ಸ್ವಾಯತ್ತ ದರವನ್ನು ಪ್ರಕಟಿಸಿದ್ದು ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳಿಂದ ಭಾರತದ ಆರ್ಥಿಕ ಪರಿಸ್ಥಿತಿ ಏರಿಕೆಯಾಗುತ್ತಿದೆ ಎಂದು ಹೇಳಿದೆ. ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಭಾರತ ಮತ್ತು ಇಂಡೋನೇಷಿಯಾದ ಅಭಿವೃದ್ಧಿ ನಿರೀಕ್ಷೆಗಳು ಬದಲಾಗದೆ ಹಾಗೆಯೇ ಇದೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ