ಅರುಣ್ ಜೇಟ್ಲಿ
ವಾಣಿಜ್ಯ
ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ವಹಿವಾಟು ನಡೆಸುವವರೇ ಜವಾಬ್ದಾರಿ: ಜೇಟ್ಲಿ
ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ಬಿಟ್ ಕಾಯಿನ್ ಮೂಲಕ ವಹಿವಾಟು ನಡೆಸುವವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ: ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ಬಿಟ್ ಕಾಯಿನ್ ಮೂಲಕ ವಹಿವಾಟು ನಡೆಸುವವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜ.2 ರ ರಾಜ್ಯಸಭೆ ಕಲಾಪದಲ್ಲಿ ಬಿಟ್ ಕಾಯಿನ್ಮ್ ಬಗ್ಗೆ ನಡೆದ ಚರ್ಚೆಯಲ್ಲಿ ಹಲವು ಮಂದಿ ಬಿಟ್ ಕಾಯಿ ಮೂಲಕ ವಹಿವಾಟು ನಡೆಸುತ್ತಿರುವುದರ ಬಗ್ಗೆ ವ್ಯಕ್ತವಾದ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಜೇಟ್ಲಿ, ಬಿಟ್ ಕಾಯಿನ್ ಅಥವಾ ಆ ರೀತಿಯ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನು ಮಾನ್ಯವಲ್ಲ
ಬಿಟ್ ಕಾಯಿನ್ ವಿಷಯದ ಬಗ್ಗೆ ಪರಿಶೀಲನೆ ನಡೆಸಲು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ