ಮತ್ತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಫ್ಟಿ 38.80 ಅಂಕಗಳ ಏರಿಕೆ

ಭಾರತೀಯ ಷೇರು ಮಾರುಕಟ್ಟೆ ಮತ್ತೊಂದು ಸರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 34 ಸಾವಿರ 100ರ ಗಡಿದಾಟಿದೆ.
ಭಾರತೀಯ ಷೇರು ಮಾರುಕಟ್ಟೆ (ಸಂಗ್ರಹ ಚಿತ್ರ)
ಭಾರತೀಯ ಷೇರು ಮಾರುಕಟ್ಟೆ (ಸಂಗ್ರಹ ಚಿತ್ರ)
ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಮತ್ತೊಂದು ಸರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 34 ಸಾವಿರ 100ರ ಗಡಿದಾಟಿದೆ.
ಇಂದು ವಹಿವಾಟು ಆರಂಭವಾದ ಕೆಲವೇ ನಿಮಿಷಗಳ ಅಂತರದಲ್ಲಿ ಸೆನ್ಸೆಕ್ಸ್ 205 ಅಂಕಗಳ ಏರಿಕೆ ಮೂಲಕ 34,175.21 ಕ್ಕೆ ಏರಿಕೆಯಾಯಿತು. ಅಂತೆಯೇ ನಿಫ್ಟಿ ಕೂಡ 38.80 ಅಂಕಗಳ ಏರಿಕೆಯೊಂದಿಗೆ 10,562.80 ಅಂಕಗಳಿಗೆ  ಏರಿಕೆಯಾಯಿತು. ಇನ್ನು ಬ್ಯಾಂಕಿಂಗ್, ರಿಯಾಲ್ ಎಸ್ಟೇಟ್ ಮತ್ತು ಉಕ್ಕಿನ ಕ್ಷೇತ್ರದ ಷೇರುಗಳ ಮೌಲ್ಯ ಏರಿಕೆ ಮುಂದುವರೆದಿದ್ದು, ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರಗದ ಷೇರುಗಳ ಮೌಲ್ಯ ಏರಿಕೆಯಾಗಿದೆ. 
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬ್ಯಾಂಕ್ ಗಳ ಬಂಡವಾಳ ಪುನಶ್ಚೇತನದಿಂದ ಹೂಡಿಕೆದಾರರಲ್ಲಿ ಆಶಾಭಾವ ಮೂಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹೂಡಿಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಟ್ಟ  ಸಾಲಗಳಿಂದ ಬಂಡವಾಳ ಕಡಿತ ಮಾಡಿಕೊಂಡಿರುವ ಸಾರ್ವಜನಿಕ ಬ್ಯಾಂಕ್ ಗಳ ಉತ್ತೇಜನಕ್ಕಾಗಿ ಈ ಹಿಂದೆ ಕೇಂದ್ರ ಸರ್ಕಾರ ಸುಮಾರು 80 ಸಾವಿರ ಕೋಟಿ ಹಣವನ್ನು ಬ್ಯಾಂಕ್ ಗಳ ಬಂಡವಾಳ ಪುನಶ್ಚೇತನಕ್ಕಾಗಿ  ಮೀಸಲಿಡುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಸೆನ್ಸೆಕ್ಸ್ ಏರಿಕೆಯಾಗಿದೆ. ಇದಲ್ಲದೆ ಭಾರತೀಯ ಷೇರು ಮಾರುಕಟ್ಟೆಗೆ ವಿದೇಶಿ ಹೂಡಿಕೆಯ ಹರಿವು ಕೂಡ ಹೆಚ್ಚಾಗಿರುವುದು ಷೇರುಮಾರುಕಟ್ಟೆಗೆ ಉತ್ತೇಜನ ನೀಡಿದೆ.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ಇಂದು ಸುಮಾರು 212.05 ಕೋಟಿ ಮೌಲ್ಯದ ಷೇರುಗಳ ಖರೀದಿ ಮಾಡಿದ್ದು, ನಿನ್ನೆ ಒಂದೇ ದಿನದಲ್ಲಿ ವಿದೇಶಿ ಹೂಡಿಕೆದಾರರು 325.24 ಕೋಟಿ ಮೌಲ್ಯದ ದೇಶೀಯ ಷೇರುಗಳನ್ನು ಖರೀದಿ  ಮಾಡಿದ್ದಾರೆ ಎಂದು ಪ್ರಸ್ತುತ ಲಭ್ಯವಾಗಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಇಂದಿನ ವಹಿವಾಟಿನಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ಷೇರುಗಳ ಮೌಲ್ಯದಲ್ಲಿ ಶೇ. 0.83ರಷ್ಚು ಏರಿಕೆ ಕಂಡುಬಂದಿದ್ದು,  ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ.1.50ರಷ್ಟು ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com