ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್

ವಿದೇಶಿ ನೇರ ಬಂಡವಾಳ ಹೂಡಿಕೆಯ ಚಿಂತನೆಯನ್ನು ಬೆಂಬಲಿಸುವುದಿಲ್ಲವಾದ ಕಾರಣ ಪತಂಜಲಿ ಸಂಸ್ಥೆಯೂ ಸಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ
ಯೋಗ ಗುರು ಬಾಬಾ ರಾಮ್ ದೇವ್
ಯೋಗ ಗುರು ಬಾಬಾ ರಾಮ್ ದೇವ್
Updated on
ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯ ಚಿಂತನೆಯನ್ನು ಬೆಂಬಲಿಸುವುದಿಲ್ಲವಾದ ಕಾರಣ ಪತಂಜಲಿ ಸಂಸ್ಥೆಯೂ ಸಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 
ಆರ್ಥಿಕ ಸಹಕಾರಕ್ಕಾಗಿ ಯಾವುದೇ ಸಂಸ್ಥೆಗಳು ಕೇಳಿದರೆ ಅದನ್ನು ಸ್ವಾಗತಿಸುವುದಾಗಿ ರಾಮ್ ದೇವ್ ಹೇಳಿದ್ದಾರೆ. ನಾವು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ, ಆರ್ಥಿಕ ಸಹಕಾರ ನೀಡುವ ಆಹ್ವಾನ ಬಂದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಪತಂಜಲಿಯ ಇ-ಕಾಮರ್ಸ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿರುವ ಯೋಗ ಗುರು ರಾಮ್ ದೇವ್ ಹೇಳಿದ್ದಾರೆ. 
ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ಸ್ ಗೂಡ್ಸ್ ವಿಭಾದಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟದ ಉದ್ದೇಶಕ್ಕಾಗಿ ಇ-ಕಾಮರ್ಸ್ ವೆಬ್ ಸೈಟ್ ಗಳೊಂದಿಗೆ ಪತಂಜಲಿ ಒಪ್ಪಂದ ಮಾಡಿಕೊಂಡಿದೆ. ಈಗ ಪತಂಜಲಿ ಉತ್ಪನ್ನಗಳು ಪೇಟಿಎಂ ಮಾಲ್, ಬಿಗ್ ಬ್ಯಾಸ್ಕೆಟ್, ಫ್ಲಿಪ್ ಕಾರ್ಟ್, ಅಮೇಜಾನ್ ಸೇರಿದಂತೆ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿಯೂ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com