ಸ್ಯಾಮ್ ಸಂಗ್
ವಾಣಿಜ್ಯ
ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ 1000 ಇಂಜಿನಿಯರ್ ಗಳ ನೇಮಕ, ಸ್ಯಾಮ್ ಸಂಗ್ ಇಂಡಿಯಾ ಘೋಷಣೆ
ದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್ ಸಂಗ್ ಭಾರತದ ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳಿಗೆ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ 1000.......
ಮುಂಬೈ: ದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್ ಸಂಗ್ ಭಾರತದ ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳಿಗೆ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ 1000 ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ಐಐಟಿ, ಎನ್ಐಟಿ, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಐಟಿಎಸ್ ಪಿಲಾನಿ, ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಐಟಿ ಮತ್ತಿತರೇ ಉನ್ನತ ಸಂಸ್ಥೆಗಳ ಇಂಜಿನಿಯರ್ ಗಳನ್ನು ಸಂಸ್ಥೆಯು ನೇಮಕ ಮಾಡಿಕೊಳ್ಳಲಿದೆ.
"ಸ್ಯಾಮ್ ಸಂಗ್ ಭಾರತದಲ್ಲಿ ಆರ್ ಅಂಡ್ ಡಿ ವಲಯದಲ್ಲಿ ಅತ್ಯಂತ ಬಲಿಷ್ಠವಾಗಿದೆ ನಾವು ಸುಮಾರು 22 ವರ್ಷಗಳಿಂದ ಇಲ್ಲಿದ್ದೇವೆ.ಭಾರತದಲ್ಲಿ ಮೂರುಆರ್ ಅಂಡ್ ಡಿ ಕೇಂದ್ರಗಳು ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳ ಸಂಬಂಧ ಕೆಲಸ ಮಾಡುತ್ತಿದೆ. "ಈ ವರ್ಷ ಭಾರತ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,000 ಇಂಜಿನಿಯರ್ ಗಳನ್ನು ದೇಶದ ಮೂರು ಆರ್ ಅಂಡ್ ಡಿ ಕೇಂದ್ರಗಳಿಗೆ ನಾವು ನೇಮಿಸಿಕೊಳ್ಳುತ್ತೇವೆ. ಇದರಲ್ಲಿ ಐಐಟಿ ಪದವೀಧರರ ಸಂಖ್ಯೆ 300ಕ್ಕಂತ ಹೆಚ್ಚಾಗಿರುತ್ತದೆ. ಬಹುಪಾಲು ಪದವೀಧರರು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಸಂಕೇತ ಸಂಸ್ಕರಣೆ, ಕಂಪ್ಯೂಟರ್ ವಿಷನ್, ಮೊಬೈಲ್ ಭದ್ರತೆ ಮತ್ತು ಇತರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಭೆಗೆ ಅಲ್ಲಿ ಸಾಕಷ್ಟು ಅವಕಾಶವಿದೆ." ಸ್ಯಾಮ್ ಸಂಗ್ ಜಾಗತಿಕ ಹಿರಿಯ ಉಪಾಧ್ಯಕ್ಷ ಮತ್ತು ಎಂಡಿ ಬೆಂಗಳೂರಿನ ಸ್ಯಾಮ್ ಸಂಗ್ ಆರ್ ಅಂಡ್ ಡಿ ಇನ್ಸ್ ದೀಪೇಶ್ ಶಾ ಹೇಳಿದರು.
ಕಳೆದ ವರ್ಷ ಸ್ಯಾಮ್ ಸಂಗ್ ತನ್ನ ಆರ್ ಅಂಡ್ ಡಿ ಕೇಂದ್ರಗಳಿಗೆ 800 ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಂಡಿತ್ತು. ಅದರಲ್ಲಿ 300 ಮಂದಿ ಐಐಟಿಗಳಿಂದ ಬಂದವರಾಗಿದ್ದರು. ಈ ವರ್ಷ ಸಹ ಐಐಟಿಗಳಿಂದ ಇಷ್ಟೇ ಸಂಖ್ಯೆಯ ಪದವೀಧರರನ್ನು ನೇಮಿಸಿಕೊಳ್ಳುವ ಸಾಧ್ಯತೆ ಇದೆ.

