ಕನಸಿನ ಮನೆ ನನಸಾದರಷ್ಟೇ ಸಾಲದು, ಅದಕ್ಕೆ ವಿಮೆಯೂ ಬೇಕು!

ಮನೆ ಖರೀದಿಸುವುದು, ಕಟ್ಟಿಸುವುದು ಬಹುತೇಕ ಜನರ ಕನಸಿನ ಯೋಜನೆಯಾಗಿರುತ್ತದೆ. ಆ ಕನಸು ನನಸಾಗುತ್ತಿದ್ದಂತೆಯೇ ಬಹಳ ಮಂದಿ ಬಹು ಮುಖ್ಯವಾದ ಅಂಶವೊಂದನ್ನು ಮರೆಯುತ್ತಾರೆ. ಅದೇನೆಂದರೆ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಹೈದರಾಬಾದ್: ಮನೆ ಖರೀದಿಸುವುದು, ಕಟ್ಟಿಸುವುದು ಬಹುತೇಕ ಜನರ ಕನಸಿನ ಯೋಜನೆಯಾಗಿರುತ್ತದೆ. ಆ ಕನಸು ನನಸಾಗುತ್ತಿದ್ದಂತೆಯೇ ಬಹಳ ಮಂದಿ ಬಹು ಮುಖ್ಯವಾದ ಅಂಶವೊಂದನ್ನು ಮರೆಯುತ್ತಾರೆ. ಅದೇನೆಂದರೆ ತಮ್ಮ ಕನಸಿನ ಮನೆಗೆ ವಿಮೆ ಮಾಡಿಸುವುದು. 
ಗೃಹ ವಿಮೆ ಕೇಳುವುದಕ್ಕೆ ಹೊಸ ಪದ ಎನಿಸಬಹುದು ಆದರೆ ನಮ್ಮ ದೇಶದಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅತ್ಯವಿದೆ. "ಸಾಮಾನ್ಯವಾಗಿ ಗೃಹ ವಿಮೆಯನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ, ಅಥವಾ ಹೆಚ್ಚಿನ ಹೊರೆ ಎಂದು ಪರಿಗಣಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗೃಹ ವಿಮೆಯ ಮಹತ್ವ ತಿಳಿಯುತ್ತಿದ್ದು, ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.
ಪ್ರವಾಹ, ಭೂಕಂಪ, ಅಗ್ನಿ ಅನಾಹುತ ಸೇರಿದಂತೆ ವಿಪತ್ತುಗಳಿಂದ ಮನೆಗೆ ಹಾನಿಯಾದಾಗ ಕಷ್ಟಪಟ್ಟು ಸಂಪಾದಿಸಿ ಮನೆ ನಿರ್ಮಾಣಕ್ಕಾಗಿ ಖರ್ಚು ಮಾಡಿದ್ದ ಹಣ ನಷ್ಟವಾಗುತ್ತದೆ. ಈ ರೀತಿಯ ಹಾನಿಗಳಿಂದ ಹಣ ನಷ್ಟವಾಗುವುದನ್ನು ತಪ್ಪಿಸಲು ಮನೆ ವಿಮೆ ಮಾಡಿಸಬೇಕೆನ್ನುತ್ತಾರೆ ಹೆಚ್ ಡಿಎಫ್ ಸಿಯ ಇಆರ್ ಜಿ ಒ ಜನರಲ್ ಇನ್ಸ್ಯೂರೆನ್ಸ್ ನ ಕಾರ್ಯನಿರ್ವಾಹಕ ವ್ಯವಸ್ಥಪನಾ ಸಮಿತಿಯ ಸದಸ್ಯ ಅನುರಾಗ್ ರಸ್ತೋಗಿ.
ಮನೆ ವಿಮೆ ಮಾಡಿಸುವುದರಿಂದ ಮನೆಯ ಒಳಗೆ ಇರುವ, ಇಎಂಐ ಮೂಲಕ ತಂದಿರುವ ಫರ್ನೀಚರ್, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳಿಗೂ ವಿಮೆ ವ್ಯಾಪ್ತಿಯಲ್ಲಿ ಬರಲಿವೆ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಜನರಲ್ ಇನ್ಸ್ಯೂರೆನ್ಸ್ ಸಂಸ್ಥೆಗಳೂ ಸಹ ಗೃಹ ವಿಮಾ ಯೋಜನೆಯನ್ನು ಹೊಂದಿವೆ. ಗೃಹ ಸಾಲದ ಅಡಿಯಲ್ಲಿ ಪಡೆದಿರುವ ಎಲ್ಲಾ ಮನೆಗಳಿಗೂ ಗೃಹ ವಿಮೆ ಇರುತ್ತದೆ. ಇಲ್ಲವಾದಲ್ಲಿ ಸಾಮಾನ್ಯದ ದರಲ್ಲಿ ವಿಮಾ ಪಾಲಿಸಿಯನ್ನು ಖರೀದಿಸಬಹುದು, ವಿಮೆಯ ಮೊತ್ತ ಹೆಚ್ಚಾಗಿರಬೇಕಾದರೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com