ಪ್ರಥಮ ತ್ರೈಮಾಸಿಕದಲ್ಲಿ ಇನ್ ಫೋಸಿಸ್ ನ ಲಾಭ 3,612 ಕೋಟಿ
ವಾಣಿಜ್ಯ
ಪ್ರಥಮ ತ್ರೈಮಾಸಿಕದಲ್ಲಿ ಇನ್ ಫೋಸಿಸ್ ನ ಲಾಭ 3,612 ಕೋಟಿ
ಜೂ.30 ಕ್ಕೆ ಕೊನೆಯಾದ 2018 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆ 3,612 ಕೋಟಿ ರೂಪಾಯಿ ಲಾಭ ಗಳಿಸಿದೆ.
ಬೆಂಗಳೂರು: ಜೂ.30 ಕ್ಕೆ ಕೊನೆಯಾದ 2018 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆ 3,612 ಕೋಟಿ ರೂಪಾಯಿ ಲಾಭ ಗಳಿಸಿದೆ.
ಈ ಹಿಂದೆ ತಾನು ಖರೀದಿಸಿದ್ದ ಇಸ್ರೇಲಿ ತಂತ್ರಜ್ಞಾನ ಸಂಸ್ಥೆ ಪನಾಯವನ್ನು ಮಾರಾಟ ಮಾಡಿದ್ದರಿಂದ ಸುಮಾರು 270 ಕೋಟಿ ರೂಪಾಯಿ ವರೆಗೆ ಸಂಸ್ಥೆಯ ಲಾಭದ ಮೇಲೆ ಪರಿಣಾಮ ಬೀರಿದ್ದು, ಲಾಭ ಸುಮಾರು 270 ಕೋಟಿ ರೂಪಾಯಿ ವರೆಗೆ ಕಡಿಮೆಯಾಗಿದೆ ಎಂದು, ಅಷ್ಟೇ ಅಲ್ಲದೇ ಈಕ್ವಿಟಿ ಷೇರಿನ ಮೌಲ್ಯವೂ ರೂ.1.24 ವರೆಗೆ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ.
ವರ್ಷದಿಂದ ವರ್ಷದ ಬೆಳವಣಿಗೆಯಲ್ಲಿ ಶೇ.12 ರಷ್ಟು ಏರಿಕೆಯಾಗಿದ್ದು, ನಿವ್ವಳ ಲಾಭ ಶೇ.3.7 ರಷ್ಟು ಏರಿಕೆಯಾಗಿದೆ. ಆದರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ.2.1 ರಷ್ಟು ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ.

