ಜೂನ್ ತಿಂಗಳಲ್ಲಿ ಭಾರತದ ಸಗಟು ಹಣದುಬ್ಬರ ಶೇಕಡಾ 5.77ರಷ್ಟು ಹೆಚ್ಚಳ

ತರಕಾರಿ ಮತ್ತು ಇಂಧನ ಬೆಲೆ ಏರಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಸಗಟು ಬೆಲೆ ಸೂಚ್ಯಂಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ತರಕಾರಿ ಮತ್ತು ಇಂಧನ ಬೆಲೆ ಏರಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಸಗಟು ಬೆಲೆ ಸೂಚ್ಯಂಕ ಜೂನ್ ತಿಂಗಳಲ್ಲಿ ಶೇಕಡಾ 5.77ರಷ್ಟು ಏರಿಕೆಯಾಗಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಶೇಕಡಾ 4.43 ಮತ್ತು ಜೂನ್ ತಿಂಗಳಲ್ಲಿ ಶೇಕಡಾ 0.90ರಷ್ಟು ಸಗಟು ಬೆಲೆ ಸೂಚ್ಯಂಕವಿದ್ದಿತು.

ಇಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಆಹಾರ ಪದಾರ್ಥಗಳ ಹಣದುಬ್ಬರ ಕಳೆದ ತಿಂಗಳು ಶೇಕಡಾ 1.80ರಷ್ಟಿದ್ದರೆ, ಮೇ ತಿಂಗಳಲ್ಲಿ ಹಣದುಬ್ಬರ ಶೇಕಡಾ 1.60ರಷ್ಟಿತ್ತು. ತರಕಾರಿಗಳ ಹಣದುಬ್ಬರ ಜೂನ್ ತಿಂಗಳಲ್ಲಿ ಶೇಕಡಾ 8.12ರಷ್ಟು ಹೆಚ್ಚಳವಾಗಿದೆ. ಮೇ ತಿಂಗಳಿಗಿಂತ ಶೇಕಡಾ 2.51ರಷ್ಟು ಹಣದುಬ್ಬರ ಅಧಿಕವಾಗಿದೆ.

ಇನ್ನು ಇಂಧನ ಮತ್ತು ವಿದ್ಯುತ್ ಗಳ ಹಣದುಬ್ಬರ ಕೂಡ ಜೂನ್ ತಿಂಗಳಲ್ಲಿ ಶೇಕಡಾ 16.18ಕ್ಕೆ ಏರಿಕೆಯಾಗಿದೆ. ಅದು ಮೇ ತಿಂಗಳಲ್ಲಿ ಶೇಕಡಾ 11.22ರಷ್ಟಿತ್ತು. ದೇಶೀಯ ಇಂಧನ ಬೆಲೆಯಲ್ಲಿ ಕಳೆದ ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡುಬಂದ ಕಾರಣ ಹೆಚ್ಚಳವಾಗಿತ್ತು.

ಬೇರೆಲ್ಲಾ ವಸ್ತುಗಳ ಬೆಲೆ ಏರಿಕೆಯಾದರೆ ಧಾನ್ಯಗಳ ಬೆಲೆ ಕಳೆದ ತಿಂಗಳು ಶೇಕಡಾ 20.23ರಷ್ಟು ಕಡಿಮೆಯಾಗಿತ್ತು. ಸರ್ಕಾರ ಬಿಡುಗಡೆ ಮಾಡಿರುವ ದಾಖಲೆ ಪ್ರಕಾರ, ಚಿಲ್ಲರೆ ಮಾರುಕಟ್ಟೆ ದರ ಕಳೆದ 5 ತಿಂಗಳಲ್ಲಿ ಶೇಕಡಾ 5ರಷ್ಟು ಹೆಚ್ಚಳವಾಗಿದ್ದು, ಇಂಧನ ಬೆಲೆ ಜಾಸ್ತಿಯಾಗಿದೆ.

ವಿತ್ತೀಯ ನೀತಿ ರಚಿಸುವ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರವನ್ನು ಮುಖ್ಯವಾಗಿ ಪರಿಗಣಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com