ನವದೆಹಲಿ: 2017-18ರ ವರ್ಷದಲ್ಲಿ ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.
ಭಾರತದಲ್ಲಿ ವಿಶ್ವದಲ್ಲಿಯೇ ಹೆಚ್ಚಿನ ಸಕ್ಕರೆ ಬಳಕೆದಾರರು ಇದ್ದಾರೆ. ಮನೆಯ ಬಳಕೆಗೆ ಆಗುವಷ್ಟು ದಾಸ್ತಾನು ಮಾಡಿಕೊಂಡು ಪ್ರತಿ ಮಿಲ್ ನಿಂದ 2-3 ಮಿಲಿಯನ್ ಟನ್ ರಪ್ತು ಮಾಡುವಂತೆ ಕಡ್ಡಾಯ ಮಾಡಲಾಗಿದೆ ಎಂದು ಕಳೆದ ವಾರ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಸೆಪ್ಟೆಂಬರ್ ತಿಂಗಳಿಗೆ ಕೊನೆಯಾಗುವ 2017-18ರ ಆವೃತ್ತಿಯಲ್ಲಿ ಭಾರತ 29.5 ಮಿಲಿಯನ್ ಟನ್ ನಷ್ಟು ಸಕ್ಕರೆ ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಪ್ರಸಕ್ತ ವರ್ಷದಲ್ಲಿ ಶೇ.45 ರಷ್ಟು ಸಕ್ಕರೆ ಉತ್ಪಾದನೆ ಹೆಚ್ಚಳವಾಗುವ ಲಕ್ಷಣ ಗೋಚರಿಸುತ್ತಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ ಶೇ.15 ರಷ್ಟು ಸ್ಥಳೀಯ ಬೆಲೆಯಲ್ಲಿ ಕುಸಿತಗೊಂಡಿದೆ.
Advertisement