ಪೋರ್ಟಿಸ್ ಆಸ್ಪತ್ರೆಯ ವ್ಯವಹಾರ ಮಣಿಪಾಲ್ ಆಸ್ಪತ್ರೆಗೆ ಮಾರಾಟ

ಪೋರ್ಟಿಸ್ ಆಸ್ಪತ್ರೆಯ ವ್ಯವಹಾರವನ್ನು ಮಣಿಪಾಲ್ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲು ಪೋರ್ಟಿಸ್ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
ಪೋರ್ಟಿಸ್ ಆಸ್ಪತ್ರೆ
ಪೋರ್ಟಿಸ್ ಆಸ್ಪತ್ರೆ

ಬೆಂಗಳೂರು: ಪೋರ್ಟಿಸ್ ಆಸ್ಪತ್ರೆಯ ವ್ಯವಹಾರವನ್ನು ಮಣಿಪಾಲ್ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲು ಪೋರ್ಟಿಸ್ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ಡಯಾಗ್ನೋಸ್ಟಿಕ್ ಚೈನ್ ಎಸ್ ಆರ್ ಎಲ್ ಕಂಪನಿಯೊಂದಿಗೆ ಶೇ.20 ರಷ್ಟು ಷೇರಿನೊಂದಿಗೆ 3.900 ಕೋಟಿ ರೂಪಾಯಿಗೆ ಒಪ್ಪಂದದೊಂದಿಗೆ ಮಣಿಪಾಲ್ ಆಸ್ಪತ್ರೆ ಹಾಗೂ ಟಿಪಿಜಿ ಕ್ಯಾಪಿಟಲ್ ಪೋರ್ಟಿಸ್ ಆಸ್ಪತ್ರೆಯನ್ನು ವಶಕ್ಕೆ ಪಡೆದುಕೊಂಡಿವೆ.

ನಿನ್ನೆ ರಾತ್ರಿ ಈ ಘೋಷಣೆ ಹೊರಬಿದ್ದಿದೆ. ಮಣಿಪಾಲ್ ಆಸ್ಪತ್ರೆಯೊಂದಿಗೆ ವಿಲೀನಕ್ಕೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದು ಪೋರ್ಟಿಸ್ ಆರೋಗ್ಯ ಸಂಸ್ಥೆ ತಿಳಿಸಿದೆ.

 ಇದರೊಂದಿಗೆ ಮಣಿಪಾಲ್ ಆಸ್ಪತ್ರೆ  ಸಾರ್ವಜನಿಕ ವ್ಯವಹಾರ ಕಂಪನಿಯಾಗಿ ಹೊರಹೊಮ್ಮಿದ್ದು, ರಾಷ್ಟ್ರೀಯ ಹಾಗೂ ದೇಶಿಯ ಷೇರು ಸಂವೇದಿ ಸೂಚ್ಯಂಕದಲ್ಲಿ ಸ್ಥಾನ ಪಡೆದುಕೊಂಡಿದೆ.

ಪೋರ್ಟಿಸ್ ಆರೋಗ್ಯ ಕಂಪನಿ ಷೇರಿನಲ್ಲಿ ಶೇಕಡಾ 36 ರಷ್ಟು  ಹೂಡಿಕೆ ಹೊಂದಿದೆ ಎಂದು ತನ್ನ ಹೇಳಿಕೆಯಲ್ಲಿ  ತಿಳಿಸಿದೆ.

ಈ ವ್ಯವಹಾರವಲ್ಲದೇ, ಡಾ, ರಾಜನ್ ಪೈ ಮತ್ತು ಟಿಪಿಜಿ ಮಣಿಪಾಲ್ ಆಸ್ಪತ್ರೆಯಲ್ಲಿ 3,900 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಂಗವಾಗಿರುವ ಮಣಿಪಾಲ್ ಆಸ್ಪತ್ರೆಗೆ  ಡಾ. ರಾಜನ್ ಪೈ  ಮಾಲೀಕರಾಗಿದ್ದಾರೆ.  ಟಿಪಿಜಿ ಹೂಡಿಕೆ ಮಾಡಿದ್ದಾರೆ.  2015ರಿಂದಲೂ  ಆರೋಗ್ಯ ಸೇವೆಯಿಂದಾಗಿ ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧಿ ಪಡೆದಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com